Thursday, March 12, 2026

ಸುದ್ದಿ

ಸುದ್ದಿ

ದೆಹಲಿಯ ಕೆಂಪು ಕೋಟೆ, ಪ್ರಮುಖ ಧಾರ್ಮಿಕ ಸ್ಥಳಗಳ ಸ್ಫೋಟಕ್ಕೆ ಎಲ್‌ಇಟಿ ಸಂಚು – ಕಹಳೆ ನ್ಯೂಸ್

ನವದೆಹಲಿ: ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ  ಉಗ್ರ ಸಂಘಟನೆಯು ದೆಹಲಿಯ ಕೆಂಪು ಕೋಟೆ ಮತ್ತು ಚಾಂದನಿ ಚೌಕ್‌ನಲ್ಲಿರುವ ದೇವಾಲಯ ಸೇರಿದಂತೆ ದೇಶಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಿದೆ ಎಂದು ಭದ್ರತಾ ಸಂಸ್ಥೆ ಮೂಲಗಳು ತಿಳಿಸಿವೆ. ಭಯೋತ್ಪಾದಕ ಸಂಘಟನೆಯು ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಾಳಿಗೆ ಸಂಚು ರೂಪಿಸಿದೆ. ಫೆಬ್ರವರಿ 6 ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿ, 160...
ಸುದ್ದಿ

3.40 ಕೋಟಿ ಹಣ ಎಟಿಎಂಗೆ ಹಾಕದೇ ವಂಚನೆ : ಸಿಎಂಎಸ್ ಕಂಪನಿಯ ಇಬ್ಬರ ವಿರುದ್ಧ FIR – ಕಹಳೆ ನ್ಯೂಸ್

ಹಾಸನ: ಎಟಿಎಂಗೆ ಹಣ ಹಾಕದೇ ವಂಚನೆ ಮಾಡಿದ್ದ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಿಎಂಎಸ್ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬೂವನಹಳ್ಳಿ ಗ್ರಾಮದ ನಂದೀಶ್.ಬಿ.ಎಲ್ ಹಾಗೂ ದಾಸರಕೊಪ್ಪಲಿನ ಮಧುಕುಮಾರ್.ಎಂ.ಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 3,40,28,200 ರೂ. ಹಣವನ್ನು ಹದಿನೈದು ಎಟಿಎಂಗಳಿಗೆ ಹಾಕದೇ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಿಎನ್‌ಎಸ್ 316 (4) 318(4), 3 (5) ಅಡಿ...
ಸುದ್ದಿ

ಅನೈತಿಕ ಸಂಬಂಧ ಶಂಕೆ : ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದ ಪತಿ – ಕಹಳೆ ನ್ಯೂಸ್

ರಾಮನಗರ: ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳೇಗೌಡನಪಾಳ್ಯದಲ್ಲಿ ನಡೆದಿದೆ. ಸಿಂಚನ(21) ಕೊಲೆಯಾದ ಮಹಿಳೆ, ಪತಿ ರೇಣುಕಯ್ಯ ಎಂಬಾತನೇ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಪತ್ನಿಯ ಶೀಲ ಶಂಕಿಸಿ ಆಗಾಗೆ ರೇಣುಕಯ್ಯ ಗಲಾಟೆ ಮಾಡ್ತಿದ್ದ. ಅದರಂತೆ ಶುಕ್ರವಾರವೂ ಕೂಡ...
ಸುದ್ದಿ

ಏ.1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ..? – ಕಹಳೆ ನ್ಯೂಸ್

ನವದೆಹಲಿ: ಏಪ್ರಿಲ್‌ 1 ರಿಂದ ದೇಶಾದ್ಯಂತ ಟೋಲ್‌ ಪ್ಲಾಜಾಗಳಲ್ಲಿ  ನಗದು ವಹಿವಾಟನ್ನು ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಚಿಂತನೆ ನಡೆಸಿದೆ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲು ಕ್ರಮ ವಹಿಸಲಾಗಿದೆ. ಹೊಸ ನಿಯಮ ಜಾರಿಯಾದಲ್ಲಿ ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಮಾಡಬೇಕಾಗುತ್ತದೆ. ಸದ್ಯ ಟೋಲ್‌ನಲ್ಲಿ ನಗದು ಪಾವತಿಗೆ ಅವಕಾಶ ಇದೆ. ಹೊಸ ನಿಯಮ ಜಾರಿಯಾದರೆ ಸಂಪೂರ್ಣ ಡಿಜಿಟಲ್ ಆಗಲಿದೆ. ಫಾಸ್ಟ್...
ಸುದ್ದಿ

ಮಹಾಕಾಳಿಪಡ್ಡು ರೈಲ್ವೇ ಕ್ರಾಸಿಂಗ್‌ ಬಂದ್‌ , ಅಂಡರ್ ಪಾಸ್ ನಿರ್ಮಾಣದ ಬಳಿಕ ಹಳೆ ಕ್ರಾಸಿಂಗ್‌ಗೆ ಕಾಂಕ್ರೀಟ್ ತಡೆಗೋಡೆ – ಕಹಳೆ ನ್ಯೂಸ್

ಮಂಗಳೂರು : ಮಹಾಕಾಳಿಪಡ್ಡು ರೈಲ್ವೇ ಅಂಡರ್ ಪಾಸ್‌ನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ ಬೆನ್ನಿಗೇ ಈ ಹಿಂದೆ ಬಳಕೆಯಲ್ಲಿದ್ದ ರೈಲ್ವೇ ಕ್ರಾಸಿಂಗನ್ನು ರೈಲ್ವೇ ಇಲಾಖೆ ಶಾಶ್ವತವಾಗಿ ಬಂದ್ ಮಾಡಿದೆ. ರೈಲ್ವೇ ಕ್ರಾಸಿಂಗ್‌ನ್ನು ಬಂದ್ ಮಾಡದಂತೆ ಸ್ಥಳೀಯರು ಮಾಡಿದ್ದ ಮನವಿಯನ್ನು ಮಾನ್ಯ ಮಾಡದ ಇಲಾಖೆ ಗೇಟ್ ಬಂದ್ ಮಾಡಿದ್ದಲ್ಲದೆ, ಹಳಿಯ ಎರಡೂ ಕಡೆಗಳಲ್ಲಿ ಸುಮಾರು ನಾಲ್ಕರಿಂದ ಐದು ಅಡಿಯ ತಡೆಗೋಡೆ ನಿರ್ಮಿಸಿದೆ. ನೂತನ ಅಂಡರ್‌ಪಾಸ್ ನಲ್ಲಿ ನೀರು ಸಂಗ್ರಹವಾಗಿ ಮಳೆಗಾಲದಲ್ಲಿ ಸಂಚರಿಸಲು ಅನಾನುಕೂಲವಾಗುವ...
ಸುದ್ದಿ

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಬೆಳ್ತಂಗಡಿ ವರ್ಷಾವಧಿ ಜಾತ್ರಾ ಮಹೋತ್ಸವ-2026: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕೃತಿಕ ವೈಭವ – ಕಹಳೆ ನ್ಯೂಸ್

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ "ಶ್ರೀ ಮನ್ಮಹಾರಥೋತ್ಸವ" ದ ಪ್ರಯುಕ್ತ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಕೆಲ್ಲಗುತ್ತು ಸಬ್ರಬೈಲು ಜಯವರ್ಮರಾಜ ಬಳ್ಳಾಲ್ ಮತ್ತು ಸಹೋದರ , ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಅಪರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು....
ಸುದ್ದಿ

ಬಾಂಗ್ಲಾದಲ್ಲಿ ಮಾತ್ರ ಅಲ್ಲ ನಮ್ಮ ದೇಶದಲ್ಲೂ ಹಿಂದೂಗಳ ಸ್ಥಿತಿ ಹೀನಾಯ: ವಿಶ್ವಪ್ರಸನ್ನ ತೀರ್ಥ ಶ್ರೀ -ಕಹಳೆ ನ್ಯೂಸ್

ದಾವಣಗೆರೆ: ಬಾಂಗ್ಲಾದಲ್ಲಿ  ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ಕೂಡ ಹಿಂದೂಗಳ  ಪರಿಸ್ಥಿತಿ ಹೀನಾಯವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನಾ ತೀರ್ಥ ಶ್ರೀಗಳು ಹೇಳಿದ್ದಾರೆ. ದಾವಣಗೆರೆಯಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದರು. ಇದರ ಬಗ್ಗೆ ಕೇಂದ್ರ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಹಿಂದೂಗಳ ಹೀನಾಯ ಸ್ಥಿತಿಯಲ್ಲಿ ಇರೋದು ಕೇವಲ ಬಾಂಗ್ಲಾದಲ್ಲಿ ಅಷ್ಟೇ ಅಲ್ಲ. ನಮ್ಮ ಭಾರತದಲ್ಲಿ ಕೂಡ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು...
ಸುದ್ದಿ

ಉಡುಪಿ ಮಠದಲ್ಲಿ ಶ್ರೀಮತಿ ಮಧುಮಿತಾ ಪಡುಮಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೃಷ್ಣ ಮಠ , ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಇಲ್ಲಿನ ರಾಜಾಂಗಣದಲ್ಲಿ ಫೆ.18 ರಂದು ಶ್ರೀಮತಿ ಮಧುಮಿತಾ ಪಡುಮಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ವೈಣಿಕ ರತ್ನ ಆರ್.ಕೆ ಪದ್ಮನಾಭ ಮೈಸೂರು ಇವರ ಶಿಷ್ಯೆಯಾಗಿರುವ ಶ್ರೀಮತಿ ಮಧುಮಿತಾ ಇವರ ತಂಡದಲ್ಲಿ ಪನ್ನಗ ಶರ್ಮನ್ ಮೃದಂಗದಲ್ಲಿ ,ಸುಹಾಸ್ ಹೆಬ್ಬಾರ್ ರಿದಂ ಪ್ಯಾಡ್ ನಲ್ಲೂ ಹಾಗೂ ಕೃಷ್ಣ ಗೋಪಾಲ್ ಕೊಳಲು ವಾದನದಲ್ಲಿ ಸಹಕಾರ...
1 21 22 23 24 25 3,288
Page 23 of 3288