Monday, March 16, 2026

ರಾಷ್ಟ್ರೀಯ

ಬೆಂಗಳೂರುಸಿನಿಮಾಸುದ್ದಿ

1 ಕೋಟಿ ಟಿಕೆಟ್‌ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1  ಟಿಕೆಟ್‌ ಬುಕ್ಕಿಂಗ್‌ ಮಾಡುವ ಬುಕ್‌ಮೈಶೋ ದಲ್ಲಿ 1 ಕೋಟಿ ಟಿಕೆಟ್‌ ಮಾರಾಟವಾಗಿದೆ. ಅಕ್ಟೋಬರ್‌ 2 ರಂದು ಕಾಂತಾರ ಬಿಡುಗಡೆಯಾಗಿದ್ದು ಈಗಲೂ ಪ್ರೇಕ್ಷಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ಶನಿವಾರ ಭಾನುವಾರ ಬಹುತೇಕ ಥಿಯೇಟರ್‌ಗಳು ಭರ್ತಿಯಾಗುತ್ತಿವೆ. ಟಯರ್‌ 2 ಮತ್ತು ಟಯರ್‌ 3 ನಗರಗಳಲ್ಲಿ ಥಿಯೇಟರ್‌ ಈಗಲೂ ಭರ್ತಿಯಾಗುತ್ತಿರುವುದು ಚಿತ್ರ ಉತ್ತಮ ಕಲೆಕ್ಷನ್‌ ಮಾಡುವ ಸಾಧ್ಯತೆಯಿದೆ. ಆರಂಭದಲ್ಲಿ ಹಿಂದಿ ಕಲೆಕ್ಷನ್‌ ಕಡಿಮೆ ಇತ್ತು. ಆದರೆ...
ಬೆಂಗಳೂರುರಾಜ್ಯಸುದ್ದಿ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ, ಸಂಚಾರದಲ್ಲಿ ವ್ಯತ್ಯಯ-ಕಹಳೆ ನ್ಯೂಸ್

ಬೆಂಗಳೂರು: ಹೊಸದಾಗಿ ಆರಂಭಗೊಂಡಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಮೆಟ್ರೋದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ ಪ್ರತಿ 25 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚಾರ ನಡೆಸುತ್ತಿವೆ. ಸಾರ್ವಜನಿಕರು ಸಹಕರಿಸಬೇಕೆಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ. ಆರ್‌ವಿ ಕಾಲೇಜ್‌ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಾಗುವ ಹಳದಿ ಮಾರ್ಗದ ಮೆಟ್ರೋ ಸೇವೆಗೆ ಇದೇ ಆಗಸ್ಟ್‌ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. 19.15 ಕಿ.ಮೀ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 16...
ಬೆಂಗಳೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂಪಾಯಿ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ – ಕಹಳೆ ನ್ಯೂಸ್

ಬೆಂಗಳೂರು: ಲಾಲ್ ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ 10 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಲಾಲ್ ಬಾಗ್ ನಲ್ಲಿ ನಾಗರೀಕರ ಜತೆ ನಡಿಗೆ ಹಾಗೂ ಸಂವಾದದ ನಂತರ ಟನಲ್ ರಸ್ತೆಗೆ ಪ್ರವೇಶ ಜಾಗ ಪರಿಶೀಲನೆ ನಡೆಸಿ ಮಾತನಾಡಿದ ಡಿಸಿಎಂ, ಅನೇಕ ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಅವರ ಸಲಹೆ, ದೂರು ಆಲಿಸಿದ್ದೇನೆ. ಅವರ ಸಮಸ್ಯೆ ಬಗೆಹರಿಸಲಾಗುವುದು. ಲಾಲ್ ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ...
ಅಂಕಣದೆಹಲಿಸುದ್ದಿ

ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜ ; ನ.25 ಕ್ಕೆ ಮೋದಿ ಧ್ವಜಾರೋಹಣ-ಕಹಳೆ ನ್ಯೂಸ್

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ  ನಿರ್ಮಾಣವಾಗಿರುವ ಭವ್ಯ ರಾಮಮಂದಿರದ  ಗರ್ಭಗುಡಿಯ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜವನ್ನು ಹಾರಿಸಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಮೇಲ್ಭಾಗದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಧಾರ್ಮಿಕ ಸಮಿತಿಯ ಸದಸ್ಯರ ಮಹತ್ವದ ಸಭೆ ಜಾನಕಿ ಘಾಟ್‌ನ ವೈದೇಹಿ ಭವನದಲ್ಲಿ ನಡೆಯಿತು. ನವೆಂಬರ್ 25 ರಂದು ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದ ರೂಪುರೇಷೆಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು...
ಅಂಕಣಬೆಂಗಳೂರುಸುದ್ದಿ

ರಾಹುಲ್ ಗಾಂಧಿ ಜೊತೆಗಿನ ಫೋಟೊ ಶೇರ್ – ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?-ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ತಾತನ ಜೊತೆ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ  ಮೊಮ್ಮಗ ಧವನ್ ರಾಕೇಶ್ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆಗಿನ ಫೋಟೊಗಳನ್ನು ಸಿದ್ದರಾಮಯ್ಯ ಮೊಮ್ಮಗ ತನ್ನ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊAಡಿದ್ದು, ರಾಜಕೀಯ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ಕಳೆದ ಆ.8 ರಂದು, ನಮ್ಮ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸದಾವಕಾಶ ನನಗೆ ದೊರೆಯಿತು....
ಜಮ್ಮು ಮತ್ತು ಕಾಶ್ಮೀರರಾಜ್ಯಸುದ್ದಿ

ಜಮ್ಮು-ಕಾಶ್ಮೀರದ ಸಾಂಬಾ ಗಡಿಯಲ್ಲಿ ಕಾಣಿಸಿಕೊಂಡ ಪಾಕ್ ಡ್ರೋನ್; ಶೋಧ ಚುರುಕು – ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಹಳ್ಳಿಗಳ ಮೇಲೆ ಎರಡು ಪಾಕಿಸ್ತಾನಿ ಡ್ರೋನ್‌ಗಳು ಸುಳಿದಾಡುತ್ತಿರುವುದು ಕಂಡುಬಂದಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಘಗ್ವಾಲ್ ಪ್ರದೇಶದ ಚಲ್ಲಿಯಾರಿ ಗ್ರಾಮ ಮತ್ತು ರಾಮಗಢದ ಚಮ್ಲಿಯಾಲ್ ಗ್ರಾಮದ ಮೇಲೆ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರೊಂದಿಗೆ ಸೇರಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಎರಡೂ ಪ್ರದೇಶಗಳನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು...
ಜಿಲ್ಲೆದೆಹಲಿರಾಜ್ಯಸುದ್ದಿ

ದೆಹಲಿಗೆ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿ ಡಿಕ್ಕಿ: ತಪ್ಪಿದ ಅನಾಹುತ – ಕಹಳೆ ನ್ಯೂಸ್

ನವದೆಹಲಿ: ಹಕ್ಕಿ ಡಿಕ್ಕಿಯಾದ ಪರಿಣಾಮ ಪುಣೆಯಿಂದ ದೆಹಲಿಗೆ ಹೊರಟಿದ್ದ ಆಕಾಶ ಏರ್ ವಿಮಾನ ದೆಹಲಿಯ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಎಂಜಿನಿಯರಿಂಗ್ ತಂಡವು ತಪಾಸಣೆ ನಡೆಸುತ್ತಿದ್ದು, ಪರಿಶೀಲನೆ ಬಳಿಕ ಸೇವೆಗೆ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 'ಅಕ್ಟೋಬರ್ 10ರಂದು ಪುಣೆಯಿಂದ ದೆಹಲಿಗೆ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ (QP 1607) ಹಕ್ಕಿ ಡಿಕ್ಕಿ ಹೊಡೆದಿದೆ. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ'...
ಅಂಕಣಬೆಂಗಳೂರುಸುದ್ದಿ

ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚನೆಗೆ ಸೂಚನೆ ; ಡಿಕೆಶಿ-ಕಹಳೆ ನ್ಯೂಸ್

ಬೆಂಗಳೂರು: ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ , ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳಗೇರಿ ಪ್ರದೇಶಗಳಿದ್ದು, ಅವುಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರಿನಲ್ಲಿ ಈ ಹಿಂದೆ ಶಾಂತಿನಗರದಲ್ಲಿ ಈ...
1 60 61 62 63 64 320
Page 62 of 320