ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆಗೂ ಕೊರೊನಾ ಸೋಂಕು ದೃಢ ; ಅರ್ಜುನ್ ಸರ್ಜಾ ಮಗಳು ನಟಿ ಐಶ್ವರ್ಯಾಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್
ಬೆಂಗಳೂರು, ಜು. 20 : ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈಗ ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆ ಅರ್ಜುನ್ ಸರ್ಜಾ ಮಗಳು ನಟಿ ಐಶ್ವರ್ಯಾ ಅರ್ಜುನ್ಗೂ ಕೂಡಾ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅವರೇ ತಿಳಿಸಿದ್ದು, ನನಗೆ ಕೊರೊನಾ ಪಾಸಿಟಿವ್ ಇರುವುದು ತಿಳಿದು ಬಂದಿದೆ. ನಾನು ಹೋಂ ಕ್ವಾರಂಟೈನ್ನಲ್ಲಿದ್ದು ಮನೆಯಲ್ಲೇ ವೈದ್ಯರು ತಿಳಿಸಿರುವ ಅಗತ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ...
