Wednesday, March 11, 2026

ರಾಷ್ಟ್ರೀಯ

ಬೆಂಗಳೂರು

ರಾಜ್ಯದಲ್ಲಿ ಹೆಚ್ಚಿದ ಬ್ರೀಟನ್ ವೈರಸ್ ಸೋಂಕಿತರ ಸಂಖ್ಯೆ; ಒಂದೇ ದಿನ 20 ಜನರಲ್ಲಿ ಸೋಂಕು ಪತ್ತೆ-ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈವರೆಗೂ 11 ಜನರಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಇಂದು ಒಂದೇ ದಿನದಲ್ಲಿ 20 ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ವರೆಗೂ 58 ಜನರಲ್ಲಿ ಸೋಂಕು ಹರಡಿದೆ. ಬೆಂಗಳೂರಿನಲ್ಲಿ ಇಂದು ಓರ್ವ ವ್ಯಕ್ತಿಯಲ್ಲಿ ರೂಪಾಂತರ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು 11 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ....
ಬೆಂಗಳೂರು

2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಪಡೆಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ- ಕಹಳೆ ನ್ಯೂಸ್

ಬೆಂಗಳೂರು:2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿಗೆ ದೊರೆತಿದೆ. ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಯನ್ನು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಚಲನಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ಪ್ರಕಟಿಸಲಾಗುವುದು. ಖ್ಯಾತ ನಟರಾದ ಶಿವರಾಜ್ ಕುಮಾರ್, ಅಜಿತ್ ಕುಮಾರ್, ಮೋಹನ್ ಲಾಲ್, ನಾಗಾರ್ಜುನ ಅಕ್ಕಿನೇನಿಯವರಿಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಬಹುಮುಖ ನಟರು...
ಬೆಂಗಳೂರು

ಮಗಳನ್ನೇ ಮದುವೆಯಾದ ಬ್ರಹ್ಮ, ತಲೆಯ ಮೇಲೆ ಒಬ್ಬಳು, ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡವರೆಲ್ಲ ನಮಗೆ ದೇವರೇ?; ಎಂದು ಪ್ರಶ್ನಿಸಿದ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ದೂರು ದಾಖಲು-ಕಹಳೆ ನ್ಯೂಸ್

ಬೆಂಗಳೂರು: ಹಿಂದೂ ದೇವತೆಗಳ ವಿರುದ್ಧ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಶಾಸಕ, ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗಳನ್ನೇ ಮದುವೆಯಾದ ಬ್ರಹ್ಮ, 16 ಸಾವಿರ ಮದುವೆಯಾದ ಕೃಷ್ಣ, ತಲೆಯ ಮೇಲೆ ಒಬ್ಬಳು, ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡವರೆಲ್ಲ ನಮಗೆ ದೇವರೇ? ಎಂದು ಅವರು ಪ್ರಶ್ನಿಸಿದ್ದು, ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ನಮಗೆ ದೇವರೇ? ಹಾವು, ಹಂದಿ, ಕುದುರೆ,...
ಬೆಂಗಳೂರು

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯದ ಜೊತೆಗೆ ಮನವಿ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ-ಕಹಳೆ ನ್ಯೂಸ್

ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೊಸ ವರ್ಷದ ಶುಭಾಶಯ ಕೋರಿದ್ದು, ಜೊತೆಗೆ ಮನವಿ ಕೂಡಾ ಮಾಡಿಕೊಂಡಿದ್ದಾರೆ. ಹಾಗೆಯೇ "ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ, ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ...
ಬೆಂಗಳೂರು

ಗುಜರಾತ್ ನ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಚಿತ್ರನಟ ಅನಿರುದ್ಧ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಮುಂದಾದ ಮಾದರಿಯಂತೆ ರಾಜ್ಯದಲ್ಲಿಯೂ ಸಹ ತೆರೆದ ಕಾಲುವೆಗಳನ್ನು ಮುಚ್ಚಬೇಕು ಎಂದು ಚಿತ್ರನಟ, ಜೊತೆಜೊತೆಯಲಿ ಖ್ಯಾತಿಯ ನಟ ಅನಿರುದ್ಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಗುಜರಾತ್ ರಾಜ್ಯದಲ್ಲಿ ತೆರದ ಕಾಲುವೆಗಳನ್ನು ಮುಚ್ಚಿ ಸೌರಫಲಕಗಳನ್ನು ಬಳಸಿ, ಎರಡೂ ಬದಿಯಲ್ಲಿ ಗೋಡೆಗಳನ್ನು ನಿರ್ಮಿಸಿ ವರ್ಟಿಕಲ್ ಗಾರ್ಡನಿಂಗ್‌ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ಸಹ ಅದೇ ಮಾದರಿಯಲ್ಲಿ ತೆರದ...
ಬೆಂಗಳೂರು

ಹಣ ಕಿತ್ಕೊಂಡು, ಚಿಕಿತ್ಸೆಯನ್ನೂ ನೀಡದೇ ನಡುರಸ್ತೆಯಲ್ಲಿ‌ ನನ್ನ ಅಜ್ಜಿನ ಸಾಯಿಸಿದ್ರು; ಮೈಸೂರಿನ ವೈದ್ಯರ ಬೇಜವಾಬ್ದಾರಿಗೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಆಕ್ರೋಶ- ಕಹಳೆ ನ್ಯೂಸ್

ಬೆಂಗಳೂರು : ಕೊರೊನಾದಂತಹ ಸಂದರ್ಭದಲ್ಲಿ ಕೆಲ ವೈದ್ಯರು ಮೆರೆಯುತ್ತಿರುವ ಬೇಜವಾಬ್ದಾರಿ ವಿರುದ್ಧ ಕಿಡಿಕಾರಿರುವ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ , ವೈದ್ಯರು ಸೂಕ್ತ ಸಮಯದಲ್ಲಿ ಸರಿಯಾದ ಬೆಡ್ ಮತ್ತು ಚಿಕಿತ್ಸೆ ನೀಡದೆ ನಮ್ಮ ಅಜ್ಜಿಯನ್ನು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಪ್ರಥಮ್, ಕೊರೊನಾ ಸಮಯದಲ್ಲಿ 2000 ಕ್ಕೂ ಹೆಚ್ಚು ಕುಟುಂಬ , ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ...
ಬೆಂಗಳೂರು

ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದಿನ ಎರಡೂವರೆ ವರ್ಷ ನಾನೇ ಇರುತ್ತೇನೆ; ಸಿಎಂ ಯಡಿಯೂರಪ್ಪ- ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದಿನ ಎರಡೂವರೆ ವರ್ಷ ನಾನೇ ಇರುತ್ತೇನೆ, ಒಂದೂವರೆ ವರ್ಷ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ್ದೇನೆ ಹಾಗಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಬಂದು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ನಾಯಕತ್ವ ಗೊಂದಲ ಕೇವಲ ಮಾಧ್ಯಮ ಸೃಷ್ಟಿಯಷ್ಟೆ, ಒಂದೆರಡು ಶಾಸಕರಲ್ಲಿ ಬೇಸರ ಇರಬಹುದು ಹಾಗಾಗಿ ಅವರೊಂದಿಗೆ ಮಾತನಾಡಿ ಸರಿಪಡಿಸಲಾಗುವುದು ಅದಕ್ಕಾಗಿಯೇ ಸಭೆ ಕೂಡ ಕರೆದಿದ್ದೇನೆ...
ಬೆಂಗಳೂರು

ಬೆಂಗಳೂರಿನಲ್ಲಿ ಇಂದು ‘ಮಧ್ಯಾಹ್ನ 12’ರಿಂದಲೇ ನಿಷೇಧಾಜ್ಞೆ ಜಾರಿ – ಕಮೀಷನರ್ ‘ಕಮಲ್ ಪಂತ್’ ಹೊಸ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ಲಾಕ್ ಆಗಲಿದೆ. ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಂಜೆ 6ರ ಬದಲು ಮಧ್ಯಾಹ್ನ 12ರಿಂದ ನಿಷೇಧಾಜ್ಞೆ ಬೆಂಗಳೂರಿನಲ್ಲಿ ಜಾರಿಯಾಗಲಿದೆ. ಈ ಸಂಬಂಧ ಹೊಸ ಆದೇಶ ಹೊರಡಿಸಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಿದ್ದರ ಬದಲಾಗಿ,...
1 299 300 301 302 303 319
Page 301 of 319