ಅರಬ್ಬಿ ಸಮುದ್ರದಲ್ಲಿ ‘ಯುದ್ಧ ಸನ್ನದ್ಧತೆ’ ಪ್ರದರ್ಶಿಸಿದ ಭಾರತೀಯ ನೌಕಾಪಡೆ-ಕಹಳೆ ನ್ಯೂಸ್
ಹೊಸದಿಲ್ಲಿ: ಪಾಕಿಸ್ತಾನ ಗಡಿಯಲ್ಲಿ ಅನಿಶ್ವಿತತೆ ಹೆಚ್ಚುತ್ತಿದ್ದಂತೆ ಭಾರತೀಯ ನೌಕಾಪಡೆಯು ತನ್ನ ಸನ್ನದ್ಧತೆಯನ್ನು ಪ್ರದರ್ಶಿಸಿದೆ. ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಹಲವಾರು ಆಯಂಟಿ-ಶಿಪ್ ಫೈರಿಂಗ್ ನಡೆಸಿದೆ. ನೌಕಾಪಡೆಯು ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸಲು ಯುದ್ಧಕ್ಕೆ ಸಿದ್ಧವಾಗಿದೆ ಎಂದು ಪ್ರತಿಪಾದಿಸುವುದರೊಂದಿಗೆ, ದೀರ್ಘ-ಶ್ರೇಣಿಯ ನಿಖರ ದಾಳಿಗಳಿಗೆ ಸಿದ್ಧತೆಯ ಪ್ರದರ್ಶನ ಮಾಡಿದೆ. ಸಮುದ್ರದ ಮಧ್ಯದಲ್ಲಿ ಯುದ್ಧನೌಕೆಗಳಿಂದ ಬ್ರಹ್ಮೋಸ್ ಆಯಂಟಿ ಶಿಪ್ ಮತ್ತು ಆಯಂಟಿ ಸರ್ಫೇಸ್ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ. ಈ ಯುದ್ಧನೌಕೆಗಳಲ್ಲಿ ಕೋಲ್ಕತಾ-ವರ್ಗದ...







