ಸಮಸ್ತ ಮಾನವ ಕುಲದ ಕಲ್ಯಾಣಕ್ಕಾಗಿ ‘ಶ್ರೀ ಮಹಾಧನ್ವಂತರಿ ಯಜ್ಞ’ವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನಗೊಂಡಿತು -ಕಹಳೆ ನ್ಯೂಸ್
ಗೋವಾ : (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರಿ) – ಪ್ರಸ್ತುತ ಸಮಯವು ಸಮಸ್ತ ಮಾನವ ಕುಲಕ್ಕೆ ಅತ್ಯಂತ ಕಷ್ಟಕರವಾದ ಸಮಯ, ಅಂದರೆ ಆಪತ್ಕಾಲವಾಗಿದೆ. ಯುದ್ಧದ ಬಿಕ್ಕಟ್ಟು ಸಮೀಪಿಸುತ್ತಿದೆ. ಈ ಕಠಿಣ ಸಮಯದಲ್ಲಿ, ಶತ್ರುಗಳು ಕೇವಲ ಆಯುಧಗಳಿಂದ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಮೂಲಕ ರೋಗಕಾರಕಗಳಾದ (ವೈರಸ್, ಬ್ಯಾಕ್ಟೀರಿಯಾ ಇತ್ಯಾದಿ) ಮೂಲಕವೂ ನಮ್ಮ ಮೇಲೆ ಆಕ್ರಮಣ ಮಾಡಬಹುದು. ಈ ಅಜ್ಞಾತ ಮತ್ತು ಹೊಸ ವಿಪತ್ತುಗಳನ್ನು ಎದುರಿಸಲು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬಲವು...







