ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರಿಂದ ಭಕ್ತಿಪೂರ್ವಕ ಗಾಯನ ಮತ್ತು ನೃತ್ಯವಂದನೆ -ಕಹಳೆ ನ್ಯೂಸ್
ಗೋವಾ : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಅವರ 83 ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರದರ್ಶಿಸಿದ ನೃತ್ಯ ಮತ್ತು ಗಾಯನವು ಭಕ್ತಿಪೂರ್ವಕ ಮತ್ತು ಈಶ್ವರಪ್ರಾಪ್ತಿಯ ಧ್ಯಾಸದೊಂದಿಗೆ ತುಂಬಿತ್ತು. ಕಲೆಯನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಸಾಧನೆಗಾಗಿಯೂ ಬಳಸಬಹುದು ಎಂಬ ಸಂದೇಶವನ್ನು ಈ ಪ್ರಸ್ತುತಿಯು ನೀಡಿತು. ಫೋಂಡಾದ ಫಾರ್ಮಾಗುಡಿಯಲ್ಲಿರುವ ಗೋವಾ ಎಂಜಿನಿಯರಿಂಗ್ ಕಾಲೇಜಿನ...







