ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವಂತೆ ಸಚಿವರಿಗೆ ಸಿಎಂ ಸೂಚನೆ -ಕಹಳೆ ನ್ಯೂಸ್
ಬೆಂಗಳೂರು,ಸೆ.8- ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸೇರಿದಂತೆ ದೆಹಲಿ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು. ಯಾರೊಬ್ಬರೂ ಕೂಡ ಅಪಸ್ವರ ತೆಗೆಯಬಾರದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಈ ಕ್ಷಣದವರೆಗೂ ದೆಹಲಿ ವರಿಷ್ಠರು ಸಂಪುಟ ಪುನಾರಚನೆ ಬಗ್ಗೆಯಾಗಲಿ ಇಲ್ಲವೇ ವಿಸ್ತರಣೆ ಮಾಡುವ ಕುರಿತಂತೆ ನನಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದೇ ತಿಂಗಳ 10ರ ನಂತರ ದೆಹಲಿಗೆ ತೆರಳಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ...







