ಪುತ್ತೂರು : ದಿವಂಗತ ಜಯಂತ್ ರೈಯವರು ಆರಂಭಿಸಿ, ದಿವಂಗತ ಮುತ್ತಪ್ಪ ರೈಯವರ ನೇತೃತ್ವದಲ್ಲಿ ಮುನ್ನಡೆವುತ್ತಿದ್ದ, ಪುತ್ತೂರು ಕಂಬಳ 30 ವರ್ಷಗಳನ್ನು ಪೂರೈಸಿದೆ. ಪ್ರಸ್ತುತ ರಾಜಕೀಯ ನಾಯಕರೇ ಮುಂಚೂಣಿಯಲ್ಲಿ ನಿಂತು ಈ ಕಂಬವನ್ನು ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಚಂದ್ರಹಾಸ ರೈ, ಶಕುಂತಲಾ ಶೆಟ್ಟಿಯವರಂತಹ ಮಾಹಾನಾಯಕರು ಈಗ ನೇತೃತ್ವ ನೀಡಿದ್ದಾರೆ. ಪುತ್ತೂರು ಕಂಬಳ ಸಮಸ್ತ ಹಿಂದೂಗಳ ಪವಿತ್ರ ಕ್ಷೇತ್ರ, ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯುವ ಕಾರಣದಿಂದ ಪುತ್ತೂರಿನ ಕಂಬಳ...
ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬಿಸಿ ರೋಡಿನಿಂದ ಪೂಂಜಾಲಕಟ್ಟೆವರೆಗೆ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇದೀಗ ಬಹು ನಿರೀಕ್ಷಿತ 725 ಕೋ.ರೂ. ವೆಚ್ಚದ ದ್ವಿತೀಯ ಹಂತದಲ್ಲಿ ಪೂಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಕಾಮಗಾರಿಯು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಬೆಂಗಳೂರಿನಲ್ಲಿ ರಾಜ್ಯದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ವೇಳೆ ಚಾರ್ಮಾಡಿ-ಪೂಂಜಾಲಕಟ್ಟೆ ರಸ್ತೆಗೂ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಮಡಂತ್ಯಾರು ಹಾಗೂ ಮಾಲಾಡಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ರಾ....
ಮಂಗಳೂರು: ಜ್ಞಾನ ಭೂಮಿ, ಧರ್ಮ ಭೂಮಿ, ಕರ್ಮಭೂಮಿಯಾಗಿದ್ದ ಭಾರತ 1,200 ವರ್ಷಗಳ ಕಾಲ ಪರಕೀಯರ ದಾಳಿಯಿಂದ ಸಂಪೂರ್ಣವಾಗಿ ತನ್ನತನವನ್ನು ಕಳೆದುಕೊಳ್ಳುವಂತಾಯಿತು. ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೊಳಿಸಿದ ಬ್ರಿಟಿಷರು ಇಲ್ಲಿನ ಜನರ ಮನಃಸ್ಥಿತಿಯನ್ನೇ ಬದಲಾಯಿಸುವಲ್ಲಿ ಯಶಸ್ವಿಯಾದರು. ಆದರೆ ಇಂದು ಮತ್ತೆ ವಿಶ್ವಕ್ಕೆ ಭಾರತ ಏನೆಂದು ತೋರಿಸಿಕೊಟ್ಟಿದ್ದೇವೆ ಎಂದು ಎಬಿವಿಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಜಿ. ಹೇಳಿದರು. ಇಲ್ಲಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಬುಧವಾರ ಅಖೀಲ ಭಾರತೀಯ ವಿದ್ಯಾರ್ಥಿ...
ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರು ಅವಳಿ ಮಕ್ಕಳೊಂದಿಗೆ ರಾಜ್ಯದ ಜನತೆಗೆ 74ನೇ ವರ್ಷದ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಅಮೂಲ್ಯ ಮತ್ತು ಇಬ್ಬರು ಮಕ್ಕಳು ವೈಟ್ ಡ್ರೆಸ್ ಹಾಕಿಕೊಂಡಿದ್ದಾರೆ. ಇಬ್ಬರನ್ನು ಕಾಲ ಮೇಲೆ ಕೂರಿಸಿಕೊಂಡು ಅಮೂಲ್ಯ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ನಟಿ ಅಮೂಲ್ಯ ಅವರು ಜಗದೀಶ್ ಅವರನ್ನು ಮದುವೆ ಆದ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಈಗ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಅಮೂಲ್ಯ ಮತ್ತು...
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ತ್ರಿವರ್ಣ ಧ್ವ್ವಜ ಹಾರಿಸುವಾಗ ಎಡವಟ್ಟು ಆಗುವುದು ಸಾಮಾನ್ಯ. ಆದರೆ ಸ್ವತಃ ರಾಜ್ಯದ ಮುಖ್ಯಮಂತ್ರಿ ಭಾಗವಹಿಸಿದ್ದ ಗಣರೋಜ್ಯೋತ್ಸವ (Republic Day) ಕಾರ್ಯಕ್ರಮದಲ್ಲೇ ತ್ರಿವರ್ಣ ಧ್ವಜವೂ ಹಾರದೆ, ರಾಷ್ಟ್ರಗೀತೆಯನ್ನೂ ತಪ್ಪಾಗಿ ಹಾಡಿದ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಸರ್ಕಾರದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರು ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ಅತ್ಯಂತ...
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರಾಜ್ಯದ ಬಡ ದಲಿತ ಖ್ಯಾತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ನೀಡಿ ಗೌರವಿಸಿದೆ. ಚಿಕ್ಕಬಳ್ಳಾಪುರ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ( Padma shri )ಪ್ರಶಸ್ತಿಯನ್ನುಕೇಂದ್ರ ಸರ್ಕಾರ ರಾಜ್ಯದ ಬಡ ದಲಿತ ಖ್ಯಾತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ನೀಡಿ ಗೌರವಿಸಿದೆ. ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ...
ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತರು ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೆ (Police) ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಬಳಿ ನಡೆದಿದೆ. ಚಿತ್ರದುರ್ಗ (Chitradurga) ಮೂಲದ ದಾದಾಫೀರ್ ಹಾಗೂ ಅನ್ಯ ಕೋಮಿನ ವಿವಾಹಿತ ಮಹಿಳೆ (Married Woman) ಕನ್ಯಾಡಿ ಪರಿಸರದಲ್ಲಿ ಸುತ್ತಾಡುತ್ತಿದ್ದು, ಲಾಡ್ಜ್‌ನಲ್ಲಿ ರೂಂ ಮಾಡಲು ಯತ್ನಿಸುತ್ತಿದ್ದರು. ಅನುಮಾನಗೊಂಡ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ...