ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ನಿಗಮದಿಂದಲೇ ಖರೀದಿಗೆ ಯೋಜನೆ : ಸಚಿವ ಎಸ್. ಅಂಗಾರ – ಕಹಳೆ ನ್ಯೂಸ್
ಸುಳ್ಯ: ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದಲೇ ಖರೀದಿಸಲು ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು. ಅವರು ರವಿವಾರ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ನಡೆದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋ ಉದ್ಯೋಗ – ಮನೆ...







