Saturday, March 7, 2026

ಚಿತ್ರದುರ್ಗ

ಚಿತ್ರದುರ್ಗರಾಜ್ಯಸುದ್ದಿ

ಚಿತ್ರದುರ್ಗ ಭೀಕರ ಬಸ್ ದುರಂತದ ಸುದ್ದಿ ಕೇಳಿ ಎದೆ ನಡುಗಿತು : CM ಸಿದ್ದರಾಮಯ್ಯ ಸಂತಾಪ-ಕಹಳೆ ನ್ಯೂಸ್

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ. ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ...
ಚಿತ್ರದುರ್ಗರಾಜ್ಯಸುದ್ದಿ

ಚಿತ್ರದುರ್ಗದ ಹಿರಿಯೂರು ಬಳಿ ಬಸ್‌ಗೆ ಬೆಂಕಿ: 20ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲು

ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರು ಬಳಿ ಬೆಳ್ಳಂ ಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಗಿ ಬಸ್‌ಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ನೋಡ ನೋಡುತ್ತಿದ್ದಂತೆಯೇ ಸುಟ್ಟು ಭಸ್ಮವಾಗಿದ್ದಾರೆ. ಹೌದು ಬೆಂಗಳೂರಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್‌ ಕೋಚ್ ಬಸ್‌ನಲ್ಲಿ ಡ್ರೈವರ್ ಕಂಡಕ್ಟರ್ ಸೇರಿ 30 ಜನ ಪ್ರಯಾಣಿಸುತ್ತಿದ್ದರು. ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ‌ ಜವನಗೊಂಡಹಳ್ಳಿ ಬಳಿ ಬಸ್‌ ಅತೀ ವೇಗವಾಗಿ ಕಂಟೇನರ್ಗೆ ಡಿಕ್ಕಿ...
ಚಿತ್ರದುರ್ಗರಾಜ್ಯಸುದ್ದಿ

ಚಿತ್ರದುರ್ಗ ಬಸ್ ದುರಂತ : ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಜಿಗಿದ ಇಬ್ಬರು ಯುವತಿಯರು-ಕಹಳೆ ನ್ಯೂಸ್

ಚಿತ್ರದುರ್ಗ : ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ 11 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ಬೇಸರದ ಸಂಗತಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಅಪಘಾತದ ಹಲವು ಭಯಾನಕ...
ಚಿತ್ರದುರ್ಗಸುದ್ದಿ

ಒಂದೇ ಮದುವೆ ಮಂಟಪದಲ್ಲಿ ಇಬ್ಬರನ್ನು ವಿವಾಹವಾದ ಭೂಪ

ಚಿತ್ರದುರ್ಗ: ಮದುವೆಗೆ ಒಂದು  ಹುಡುಗಿ  ಸಿಕ್ತಿಲ್ಲ  ಅನ್ನೋ  ಕಾಲದಲ್ಲಿ  ಇಲ್ಲೊಬ್ಬ  ಯುವಕ  ಒಂದೇ  ದಿನ  ಇಬ್ಬರು  ಹುಡುಗಿಯರನ್ನು  ಮದುವೆಯಾಗಿದ್ದಾರೆ.  ಒಂದೇ  ಕಲ್ಯಾಣ ಮಂಟಪಲ್ಲಿ  ಒಬ್ಬ ವರ ಇಬ್ಬರು ವಧುವನ್ನು ಮದುವೆಯಾಗಿದ್ದಾರೆ. ಚಿತ್ರದುರ್ಗದಲ್ಲಿ  ನಡೆದ  ಒಂದು  ಅದ್ಭುತ  ಮದುವೆಯ  ಸುದ್ದಿ  ಎಲ್ಲೆಡೆ  ಭಾರೀ  ಸದ್ದು ಮಾಡುತ್ತಿದೆ. ಈ ಮದುವೆಯ ವಿಡಿಯೋಗಳು ಎಲ್ಲೆಡೆ ವೈರಲ್​ ಆಗಿದ್ದು, ಜನರಲ್ಲಿ ನಾನಾ ಚರ್ಚೆಗಳನ್ನು ಉಂಟುಮಾಡಿದೆ. ಒಬ್ಬ ಯುವಕ ಇಬ್ಬರು ಯುವತಿಯರನ್ನು ಮದುವೆಯಾಗಿ, ಒಂದೇ ಮಂಟಪದಲ್ಲಿ ಇಬ್ಬರು ಹೆಂಡಿರ ಕೈ ಹಿಡಿದು ವರಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ಮದುವೆ ಕಥೆಯೇ ಬಹಳ ರೋಚಕವಾಗಿದೆ. ವಸೀಮ್ ಶೈಖ್ ಎನ್ನುವ ಯುವಕನನ್ನ ಇಬ್ಬರು ಸ್ನೇಹಿತೆಯರು ಮದುವೆ ಆಗಿದ್ದಾರೆ. ಶಿಫಾ ಶೈಖ್, ಜನ್ನತ್ ಮಖಂದರ್ ಎಂಬ ಇಬ್ಬರು ಸ್ನೇಹಿತೆಯರು ಒಬ್ಬನನ್ನೇ ಮದುವೆ ಆಗಿದ್ದು, ಚಿತ್ರದುರ್ಗದ ಹೊರಪೇಟೆಯ ವಸೀಮ್ ಜೊತೆ ಮದುವೆ ಮಾಡಿಕೊಂಡಿದ್ದಾರೆ....
ಚಿತ್ರದುರ್ಗಸಂತಾಪಸುದ್ದಿ

ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ : ಚಲಿಸುತ್ತಿದ್ದ ಇನ್ನೋವಾ ಕಾರಿನ ಟಯರ್ ಸ್ಫೋಟಗೊಂಡು ತಮಿಳುನಾಡು ಮೂಲದ ಮೂವರು ಸ್ಥಳದಲ್ಲೇ ಮೃ*ತ್ಯು- ಕಹಳೆ ನ್ಯೂಸ್

ಚಿತ್ರದುರ್ಗ: ಚಲಿಸುತ್ತಿದ್ದ ಇನ್ನೋವಾ ಕಾರಿನ ಟಯರ್ ಸ್ಫೋಟಗೊಂಡು ಡಿವೈಡರ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಹೊರವಲಯದ ಸೀಬಾರದ ಗೋಶಾಲೆ ಬಳಿ ಸಂಭವಿಸಿದೆ. ಮೃತರನ್ನು ತಮಿಳುನಾಡು ಮೂಲದ ಅರ್ಜುನ್ (28) , ಸರವಣ್ (30) , ಶ್ರೀಧರ್ (30) ಎನ್ನಲಾಗಿದೆ. ಮೃತ ಅರ್ಜುನ್ ತಮಿಳುನಾಡು ಮೂಲದ ಪೊಲೀಸ್ ಪೇದೆಯಾಗಿದ್ದಾರೆ. ಕಾರಿನಲ್ಲಿದ್ದವರು ತಮಿಳುನಾಡಿನ ಕೃಷ್ಣಗಿರಿ ಮೂಲದವರು...