Saturday, March 7, 2026

ಕ್ರೈಮ್

ಅಂಕಣಕ್ರೈಮ್ಮಂಜೇಶ್ವರಸುದ್ದಿ

ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ ; ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್‌ ಪ್ಲ್ಯಾನ್‌?-ಕಹಳೆ ನ್ಯೂಸ್

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಆರಂಭದಿಂದಲೂ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಶುಕ್ರವಾರ (ಸೆ.19) ಮಹೇಶ್‌ಶೆಟ್ಟಿ ತಿಮರೋಡಿ ಆರೋಪಿ ಚಿನ್ನಯ್ಯನ ಜೊತೆ ಮಾತನಾಡಿದ್ದ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದರು. ಇದೀಗ ಅದರ ಮುಂದುವರಿದ ಭಾಗ ಬಹಿರಂಗಗೊಂಡಿದೆ. 2 ವರ್ಷಗಳ ಹಿಂದೆ 2023ರ ಆಗಸ್ಟ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಚಿನ್ನಯ್ಯ ಭೇಟಿಯಾಗಿದ್ದ ವಿಡಿಯೋ ಇದ್ದಾಗಿದ್ದು, ಶುಕ್ರವಾರ ರಿಲೀಸ್ ಮಾಡಿದ್ದ ವಿಡಿಯೋದ ಮುಂದುವರಿದ ಭಾಗವಿದು. ವಿಡಿಯೋದಲ್ಲಿ ಆರೋಪಿ ಚಿನ್ನಯ್ಯ ಸ್ಟಾಟ್...
ಅಂಕಣಅಂತಾರಾಷ್ಟ್ರೀಯಕ್ರೈಮ್ಸುದ್ದಿ

ಅಮೆರಿಕ ಪೊಲೀಸರ ಗುಂಡೇಟಿಗೆ ; ಭಾರತೀಯ ಟೆಕ್ಕಿ ಬಲಿ-ಕಹಳೆ ನ್ಯೂಸ್

ವಾಷಿಂಗ್ಟನ್‌: ಅಮೆರಿಕ ಪೊಲೀಸರು ಭಾರತೀಯ ಮೂಲದ ಟೆಕ್ಕಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ನಡೆದಿದೆ. ಮೃತ ಭಾರತೀಯ ಮೂಲದ ಟೆಕ್ಕಿಯನ್ನು ತೆಲಂಗಾಣದ ಮೆಹಬೂಬ್‌ನಗರದ ಮೊಹಮ್ಮದ್ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. 2016ರ ಬಳಿಕ ತಮ್ಮ ಉನ್ನತ ಶಿಕ್ಷಣಕ್ಕಾಗಿ ಯುಎಸ್‌ಗೆ ತೆರಳಿದ್ದರು. ಫ್ಲೋರಿಡಾ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮುಗಿಸಿ, ಬಳಿಕ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಸಾಂತಾ ಕ್ಲಾರಾ ಪೊಲೀಸರ ಮಾಹಿತಿ ಪ್ರಕಾರ, ಸೆ.3ರಂದು ಬೆಳಗ್ಗೆ...
ಅಂಕಣಕ್ರೈಮ್ಬೆಂಗಳೂರುಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ; ಸಿಎಂ ನಿಂದಿಸಿದ್ದ ನಿವೃತ್ತ ಯೋಧನ ಬಂಧನ-ಕಹಳೆ ನ್ಯೂಸ್

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ವ್ಯಕ್ತಿಯನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಸಂತ್ ಕುಮಾರ್ (40) ಬಂಧಿತ ಆರೋಪಿ. ಸಕಲೇಶಪುರದ ವಸಂತ್ ಕುಮಾರ್ ನಿವೃತ್ತ ಯೋಧನಾಗಿದ್ದು, ನಿವೃತ್ತಿ ಬಳಿಕ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದ. ಮೈಸೂರಿನಲ್ಲಿ  ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನ ಕನ್ನಡ ಬರುತ್ತ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಇದಕ್ಕೆ ಹನುಮ ಭಕ್ತ ಅನ್ನೋ ಫೇಸ್‌ಬುಕ್ ಪೇಜ್‌ನಲ್ಲಿ ಸಿಎಂ ನಿಂದಿಸಿ ವಸಂತ್ ಕುಮಾರ್ ಪೋಸ್ಟ್...
ಅಂಕಣಕ್ರೈಮ್ಮಂಗಳೂರುಸುದ್ದಿ

ಬಂಗ್ಲೆಗುಡ್ಡ ರಹಸ್ಯ ; 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಡಗಿನ ವ್ಯಕ್ತಿಯ ಐಡಿ ಕಾರ್ಡ್‌, ವಾಕಿಂಗ್‌ ಸ್ಟಿಕ್‌ ಪತ್ತೆ-ಕಹಳೆ ನ್ಯೂಸ್

ಮಂಗಳೂರು: ಧರ್ಮಸ್ಥಳದ  ಬಂಗ್ಲೆಗುಡ್ಡದ ರಹಸ್ಯ ಬೇಧಿಸಲು ಹೊರಟ ವಿಶೇಷ ತನಿಖಾ ತಂಡ ಇಂದು 2ನೇ ದಿನದ ಶೋಧ ಕಾರ್ಯ ನಡೆಸಿದೆ. ನಿನ್ನೆಯ ಶೋಧ ವೇಳೆ 5 ತಲೆ ಬುರುಡೆ ಸೇರಿ ನೂರಾರು ಮೂಳೆಗಳು ಸಿಕ್ಕಿದ್ದು ಅದೆಲ್ಲವೂ ಪುರುಷರದ್ದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇಂದು ಕೂಡ ಬುರುಡೆ ಮತ್ತು ಅಸ್ಥಿಪಂಜರ  ಸಿಕ್ಕಿದ್ದು, ಇದರ ಜೊತೆಗೆ ಕೊಡಗು ಮೂಲದ ಯು.ಬಿ ಅಯ್ಯಪ್ಪ ಎಂಬುವವರಿಗೆ ಸೇರಿದ ಮಹತ್ವದ ದಾಖಲೆಗಳು ಪತ್ತೆಯಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ...
ಅಂಕಣಕ್ರೈಮ್ಸುದ್ದಿ

ಬಂಗ್ಲೆಗುಡ್ಡದಲ್ಲಿ ಸಿಕ್ಕ ಐದು ತಲೆ ಬುರುಡೆ, ಮೂಳೆಗಳು ಪುರುಷರದ್ದು ; ಇಂದು ಎರಡನೇ ದಿನದ ಶೋಧ ಕಾರ್ಯ-ಕಹಳೆ ನ್ಯೂಸ್

ಧರ್ಮಸ್ಥಳ: ಧರ್ಮಸ್ಥಳದ ಬಂಗ್ಲೆಗುಡ್ಡ  ರಹಸ್ಯ ಬೇಧಿಸಲು ಹೊರಟ ಎಸ್‌ಐಟಿ ಇಂದು ಎರಡನೇ ದಿನದ ಶೋಧ ಕಾರ್ಯ ನಡೆಸಿದೆ. ಬುಧವಾರ ಶೋಧ ನಡೆಸಿದ ವೇಳೆ ಐದು ತಲೆ ಬುರುಡೆ ಸೇರಿ ನೂರಾರು ಮೂಳೆಗಳು ಸಿಕ್ಕಿದ್ದು ಅದೆಲ್ಲವೂ ಪುರುಷರದ್ದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದಲ್ಲಿ ತಲೆ ಬುರುಡೆ ತಂದಿದ್ದ ಸೌಜನ್ಯಳ ಮಾವ ವಿಠಲ ಗೌಡನನ್ನು ಎರಡು ಬಾರಿ ಬಂಗ್ಲೆಗುಡ್ಡಕ್ಕೆ ಕರೆತಂದ ಎಸ್‌ಐಟಿ ಅಧಿಕಾರಿಗಳು ಮಹಜರು ನಡೆಸಿದ್ದರು. ಮಹಜರು ನಡೆದ...
ಅಂಕಣಕ್ರೈಮ್ಸುದ್ದಿ

75ರ ವೃದ್ಧನ ; ಮದುವೆಯಾಗಲು ಭಾರತಕ್ಕೆ ಬಂದಿದ್ದ ಅಮೆರಿಕದ 71ರ ವೃದ್ಧೆ ಕೊಲೆ-ಕಹಳೆ ನ್ಯೂಸ್

ಚಂಡೀಗಢ: 75 ವರ್ಷದ ಅನಿವಾಸಿ ಭಾರತೀಯನನ್ನು ಮದುವೆಯಾಗಲು ಪಂಜಾಬ್‌ಗೆ ಬಂದಿದ್ದ 71 ವರ್ಷದ ಅಮೆರಿಕ ಪ್ರಜೆ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಜುಲೈನಲ್ಲಿ ಘಟನೆ ನಡೆದಿದೆ. ಮಹಿಳೆಯ ನಾಪತ್ತೆಗೆ ಸಂಬಂಧಿಸಿದಂತೆ ಲುಧಿಯಾನ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ಇತ್ತೀಚೆಗೆ ಬೆಳಕಿಗೆ ಬಂದಿದೆ. ರೂಪಿಂದರ್ ಕೌರ್ ಪಂಧೇರ್ ಇಂಗ್ಲೆಂಡ್‌ನವರು. ಚರಣ್‌ಜಿತ್ ಸಿಂಗ್ ಗ್ರೆವಾಲ್ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜುಲೈ 24 ರಂದು ಪಂಧೇರ್ ಅವರ ಮೊಬೈಲ್‌...
ಅಂಕಣಕ್ರೈಮ್ಸುದ್ದಿ

ಉತ್ತರಾಖಂಡದ ಚಮೋಲಿಯಲ್ಲಿ ಮೇಘಸ್ಫೋಟ ; 5ಕ್ಕೂ ಹೆಚ್ಚು ಜನ ನಾಪತ್ತೆ, ಕಟ್ಟಡಗಳು ನೆಲಸಮ-ಕಹಳೆ ನ್ಯೂಸ್

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿಯಲ್ಲಿ ಮತ್ತೆ ಮೇಘಸ್ಫೋಟ  ಸಂಭವಿಸಿದ್ದು, 5ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಚಮೋಲಿ ಜಿಲ್ಲೆಯ ನಂದಾ ನಗರದಲ್ಲಿ ಬುಧವಾರ (ಸೆ.17) ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮೇಘಸ್ಫೋಟ ಸಂಭವಿಸಿದೆ. ಭಾರೀ ಪ್ರಮಾಣದ ನೀರು ಹರಿದು ಬಂದಿದ್ದು, 6 ಕಟ್ಟಡಗಳು ನೆಲಸಮಗೊಂಡಿವೆ. ಇನ್ನೂ 5ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಸದ್ಯ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಲೋಕೋಪಯೋಗಿ ಇಲಾಖೆಯ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಜೊತೆಗೆ...
ಅಂಕಣಕ್ರೈಮ್ಬೆಂಗಳೂರುಸುದ್ದಿ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ; ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್-ಕಹಳೆ ನ್ಯೂಸ್

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಯೋಗ ಗುರು ನಿರಂಜನಾ ಮೂರ್ತಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರವೊಂದನ್ನು ನಡೆಸುತ್ತಿದ್ದ. ಈ ಯೋಗ ಸೆಂಟರ್‌ಗೆ ಓರ್ವ ಅಪ್ರಾಪ್ತ ಬಾಲಕಿ ಬರುತ್ತಿದ್ದಳು. ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು, ನಿನ್ನ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರ್ಕಾರಿ ಕೆಲಸವೂ ಸಿಗಬಹುದು ಎಂದು ನಂಬಿಸಿ, ಅಪ್ರಾಪ್ತೆಯ ಮೇಲೆ...
1 5 6 7 8 9 128
Page 7 of 128