ಕುಕ್ಕೆ ಸುಬ್ರಹ್ಮಣ್ಯ ಸಮೀಪ ಶಂಕಿತ ನಕ್ಸಲರು ಪತ್ತೆ..! ಮನೆಗೆ ಭೇಟಿ ನೀಡಿ ಮೊಬೈಲ್ ಚಾರ್ಚ್ ಮಾಡಿರುವ ತಂಡ – ಕಹಳೆ ನ್ಯೂಸ್
ದಕ್ಷಿಣಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ನಿನ್ನೆ ಸಂಜೆ ನಾಲ್ಕೈದು ಜನ ಅಪರಿಚಿತರು ಬಂದು ಹೋಗಿದ್ದು, ನಕ್ಸಲರಿರಬಹುದೇ ಎಂಬ ಗುಮಾನಿ ಈ ಪ್ರದೇಶದಲ್ಲಿ ಹಬ್ಬಿದೆ. ಗ್ರಾಮಸ್ಥರೊಬ್ಬರ ಮನೆಗೆ ಬಂದಿದ್ದ ಅಪರಿಚಿತರು ಸುಮಾರು ಒಂದು ಗಂಟೆಗಳ ಕಾಲ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಮೊಬೈಲ್ ಚಾರ್ಚ್ ಮಾಡಿಕೊಂಡು ತೆರಳಿದ್ಧಾರೆ ಎನ್ನಲಾಗಿದೆ. ಶನಿವಾರ ಸಂಜೆ 6 ಗಂಟೆ...







