ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ :ವಿರಾಟ್ ಕೊಹ್ಲಿ – ಕಹಳೆ ನ್ಯೂಸ್
ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಬರಿಗೈಯಲ್ಲಿ ಹಿಂದಿರುಗಿದೆ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು ಈ ನಡುವೆ ತಮ್ಮ ತಂಡದ ಯುವ ಆಟಗಾರರಿಗೆ ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ ಎಂದು ಹೇಳಿದ್ದಾರೆ. ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿನ ವಾತಾವರಣವು ತುಂಬಾ ಸ್ನೇಹಪರವಾಗಿದೆ. ಅಲ್ಲಿ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುಕ್ತ ಅವಕಾಶವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲಾ ಆಟಗಾರರನ್ನು ಸಮಾನ ಗೌರವದಿಂದ ಕಾಣಲಾಗುತ್ತದೆ....







