ಸ್ಯಾಂಡಲ್ವುಡ್ನ ಬುದ್ಧಿವಂತನಿಗೂ ಹ್ಯಾಕರ್ ಕಾಟ ; ವಿಡಿಯೋ ಹಂಚಿಕೊಂಡ ಉಪ್ಪಿ ದಂಪತಿ-ಕಹಳೆ ನ್ಯೂಸ್
ಇತ್ತೀಚೆಗೆ ಮೊಬೈಲ್ ಹ್ಯಾಕರ್ಗಳ ಕಾಟ ಹೆಚ್ಚಾಗಿದೆ. ಈ ಬಿಸಿ ಇದೀಗ ಸ್ಯಾಂಡಲ್ವುಡ್ನ ಬುದ್ಧಿವಂತನಿಗೂ ತಟ್ಟಿದೆ. ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ ಬೆಳ್ಳಂಬೆಳಗ್ಗೆ ವೀಡಿಯೋ ಮೂಲಕ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅದಕ್ಕೂ ಮುನ್ನ ಅನೌನ್ಸ್ ಮಾಡ್ತಿದ್ದೇವೆ. ಮುಂದೆ ಪೊಲೀಸರಿಗೆ ದೂರನ್ನೂ ಕೊಡುತ್ತೇವೆ ಎಂದಿದ್ದಾರೆ ದಂಪತಿ. ಫೋನ್ ಹ್ಯಾಕ್...







