Friday, March 6, 2026

ಅಂಕಣ

ಅಂಕಣಬೆಂಗಳೂರುಸುದ್ದಿಹೆಚ್ಚಿನ ಸುದ್ದಿ

ಬೆಂಗಳೂರಿಗೆ ಮೋದಿ 5,700 ಇ-ಬಸ್‌ ಗಿಫ್ಟ್ ; ತೇಜಸ್ವಿ ಸೂರ್ಯ ಹರ್ಷ-ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸರ್ಕಾರ 5,700 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬಸ್ಸುಗಳನ್ನು ಬೆಂಗಳೂರಿಗೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, FAME ಯೋಜನೆಗಳು ಮತ್ತು PM E-ಡ್ರೈವ್ ಮೂಲಕ 21,000 ಕ್ಕೂ ಹೆಚ್ಚು ವಿದ್ಯುತ್ ಬಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿತು. ಇವುಗಳಲ್ಲಿ 5,700 ಕ್ಕೂ ಹೆಚ್ಚು ಬಸ್‌ಗಳನ್ನು ಬೆಂಗಳೂರಿಗೆ ಹಂಚಿಕೆ ಮಾಡಲಾಗಿದೆ ಮತ್ತು 1,221...
ಅಂಕಣಮಂಗಳೂರುಸುದ್ದಿಹೆಚ್ಚಿನ ಸುದ್ದಿ

ಇಂದು ಸಿಎಂ ಸಿದ್ದರಾಮಯ್ಯ ; ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ-ಕಹಳೆ ನ್ಯೂಸ್

ಮಂಗಳೂರು: ಸಿಎಂ ಸಿದ್ದರಾಮಯ್ಯ  ಅವರಿಂದು ದಕ್ಷಿಣ ಕನ್ನಡ  ಪ್ರವಾಸ ಕೈಗೊಂಡಿದ್ದು, ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು (ಡಿ.3) ಬೆಳಿಗ್ಗೆ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ 11:40ಕ್ಕೆ ಉಳ್ಳಾಲ ತಾಲೂಕಿನ ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ನಡೆಯಲಿರುವ ಶತಮಾನದ ಪ್ರಸ್ತಾನ ಶ್ರೀನಾರಾಯಣ ಗುರು-ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆನಂತರ ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ...
ಅಂಕಣಅಂತಾರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಚಂಡಮಾರುತ ಪೀಡಿತ ಶ್ರೀಲಂಕಾಕ್ಕೆ ; ಅವಧಿ ಮುಗಿದ ಆಹಾರ ಸಾಮಗ್ರಿ ಕಳಿಸಿದ ಪಾಕ್‌-ಕಹಳೆ ನ್ಯೂಸ್

ಇಸ್ಲಾಮಾಬಾದ್: ದಿತ್ವಾ ಚಂಡಮಾರುತದಿಂದ  ತತ್ತರಿಸಿರುವ ಶ್ರೀಲಂಕಾಗೆ  ಪಾಕಿಸ್ತಾನ ಒಂದು ವರ್ಷದ ಅವಧಿ ಮುಗಿದ ಆಹಾರ ಸಾಮಗ್ರಿಗಳನ್ನು ಕಳುಹಿಸುವ ಮೂಲಕ ವಿವಾದಕ್ಕೆ ಸಿಲುಕಿದೆ. ಆಹಾರ ಸಾಮಗ್ರಿಗಳನ್ನು ವಾಯು ಮತ್ತು ಸಮುದ್ರದ ಮೂಲಕ ರವಾನಿಸಲಾಯಿತು. ಶ್ರೀಲಂಕಾಗೆ ನೆರವು ನೀಡಲಾಗಿದೆ ಎಂದು ಪಾಕಿಸ್ತಾನ ಫೋಟೊ ಜೊತೆ ಪೋಸ್ಟ್‌ ಹಂಚಿಕೊಂಡಿತ್ತು. ಪಾಕ್‌ ಕಳುಹಿಸಿರುವ ವೈದ್ಯಕೀಯ ಮತ್ತು ಆಹಾರ ಸಾಮಗ್ರಿಗಳಲ್ಲಿ ಬಳಸಲು ಉಪಯುಕ್ತವಲ್ಲದ ಅವಧಿ ಮೀರಿದ ವಸ್ತುಗಳು ಸೇರಿವೆ ಎಂಬುದು ಬಹಿರಂಗಗೊಂಡಿದೆ. ಪಾಕಿಸ್ತಾನ ಹೈಕಮಿಷನ್ ಶ್ರೀಲಂಕಾ ಹಂಚಿಕೊಂಡ...
ಅಂಕಣಬೆಂಗಳೂರುಸುದ್ದಿಹೆಚ್ಚಿನ ಸುದ್ದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ; ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ-ಕಹಳೆ ನ್ಯೂಸ್

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು ಮತ್ತು ಒಟ್ಟಾರೆ ಅನುಕೂಲತೆಯನ್ನು ಸುಧಾರಿಸಲು ಇದೇ ಡಿ.8ರಿಂದ ವರ್ಧಿತ ಪಿಕಪ್ ನಿಯಮಗಳನ್ನು ಪರಿಚಯಿಸುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವೇಗವಾಗಿ ಬೆಳೆಯುತ್ತಿರುವ ಹಾಗೂ ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1,30,000 ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ...
ಅಂಕಣಬೆಂಗಳೂರುಸುದ್ದಿ

ಪೋಕ್ಸೋ ಕೇಸ್‌ ; ಬಿಎಸ್‌ವೈಗೆ ಸುಪ್ರೀಂನಿಂದ ಬಿಗ್‌ ರಿಲೀಫ್‌- ಕಹಳೆ ನ್ಯೂಸ್

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತು ನಾಲ್ವರು ಸುಪ್ರೀಂ ಮೊರೆ ಹೋಗಿದ್ದರು. ಇಂದು ಸಿಜೆಐ ಸೂರ್ಯಕಾಂತ್‌ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ವಿಚಾರಣೆಗೆ ತಡೆ ನೀಡಿದೆ. ಬಿಎಸ್‌ವೈ ಪರ ಹಿರಿಯ ವಕೀಲ ಸಿದ್ದಾರ್ಥ್‌ ಲೂತ್ರಾ ಅವರು ಹೈಕೋರ್ಟ್‌ ಆದೇಶದಲ್ಲಿರುವ ಕೆಲವು ದೋಷಗಳನ್ನು ಉಲ್ಲೇಖಿಸಿ ವಾದಿಸಿದರು. ವಾದ ಆಲಿಸಿದ ಸುಪ್ರೀಂ ವಿಚಾರಣೆಗೆ ತಡೆ ನೀಡಿ...
ಅಂಕಣಬೆಂಗಳೂರುಸುದ್ದಿ

ಹೈಕಮಾಂಡ್‌ ಹೇಳಿದಾಗ ಡಿಕೆಶಿ ಸಿಎಂ ; ಸಿದ್ದರಾಮಯ್ಯ-ಕಹಳೆ ನ್ಯೂಸ್

ಬೆಂಗಳೂರು: ಹೈಕಮಾಂಡ್‌ ಹೇಳಿದಾಗ ಡಿಕೆ ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌ ಅವರ ಸದಾಶಿವ ನಗರದ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ  ಡಿಕೆಶಿ ಯಾವಾಗ ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಹೈಕಮಾಂಡ್‌ ಹೇಳಿದಾಗ ಎಂದು ಉತ್ತರ ನೀಡಿ ತೆರಳಿದರು. ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ  ಇಬ್ಬರು ಮಾತನಾಡಿದ್ದೇವೆ ಎಂದು ಸಿಎಂ ತಿಳಿಸಿದರು.  ನಾವು ಪಕ್ಷದ ವಿಚಾರದ ಬಗ್ಗೆ...
ಅಂಕಣದೆಹಲಿಸುದ್ದಿ

ಭಾರತದಲ್ಲಿ ಖರೀದಿಸುವ ಎಲ್ಲಾ ಫೋನ್‌ಗಳಿಗೆ ‘ಸಂಚಾರ್ ಸಾಥಿ’ ಕಡ್ಡಾಯ-ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಆಪ್‌  ಕಡ್ಡಾಯವಾಗಿ ಇರಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡಲು ಆಯ್ಕೆ ನೀಡಬಾರದು. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಕೇಂದ್ರ ಸೂಚನೆ ನೀಡಿದೆ. ನವೆಂಬರ್ 28, 2025 ರಂದು ಹೊರಡಿಸಲಾದ ಆದೇಶದ ಪ್ರಕಾರ,...
ಅಂಕಣಕೇರಳಸುದ್ದಿ

ಶಬರಿಮಲೆ ; ಅಯ್ಯಪ್ಪನ ಹುಂಡಿಗೆ 15 ದಿನದಲ್ಲೇ 92 ಕೋಟಿ ರೂ-ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲೇ ಹುಂಡಿಗೆ 92 ಕೋಟಿ ರೂ. ಹರಿದುಬಂದಿದೆ. ಈ ಕುರಿತು ಶಬರಿಮಲೆ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ದೇಗುಲಕ್ಕೆ 69 ಕೋಟಿ ರೂ. ಆದಾಯ ಬಂದಿತ್ತು. ಈ ಸಲ ಶೇ.33ರಷ್ಟು ಹೆಚ್ಚಳದೊಂದಿಗೆ 92 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದ ಮೊತ್ತಕ್ಕಿಂತ ಇದು 23 ಕೋಟಿ...
1 2 3 4 43
Page 2 of 43