ಶ್ರೀ ಧರ್ಮಸ್ಥಳ ಮೇಳದ ಸೇವೆಯಾಟ ಸಂಪನ್ನ – ಕಹಳೆ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಈ ಸಾಲಿನ ಕೊನೆಯ ಸೇವೆಯಾಟಗಳು ಮೇ 26, 27 ಮತ್ತು 28ರಂದು ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 7ರಿಂದ 12ರ ವರೆಗೆ ನಡೆಯಿತು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಡಾ| ಹೇಮಾವತಿ ವೀ. ಹೆಗ್ಗಡೆಯವರು, ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಕುಮಾರ್ ಮತ್ತು ಹೆಗ್ಗಡೆ ಕುಟುಂಬದವರು ಹಾಗೂ ಹರಕೆ ಸೇವೆಯ ಸೇವಾರ್ಥಿಗಳು, ಕ್ಷೇತ್ರದ ಸಿಬಂದಿ ವರ್ಗ ಹಾಗೂ ಭಕ್ತರು ಭಾಗವಹಿಸಿದ್ದರು. ಮೇ...







