ಮುಂಬೈ : ಭಾರತ ರತ್ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಜನವರಿ 8ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಕೊರೊನಾ ಸೋಂಕು ಕೂಡ ದೃಢಪಟ್ಟಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು. ಇಂದೋರ್ ನಲ್ಲಿ 1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಪ್ರಾಥಮಿಕವಾಗಿ ಹಿಂದಿ ಮತ್ತು...
ಪುತ್ತೂರು : ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ಉದ್ಯೋಗಿ ಬಿಟಿ ರಂಜನ್ ಮಂಗಳೂರಿನ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮುಂಜಾನೆ ದೈವಾಧೀನರಾಗಿದ್ದಾರೆ....
ಬೆಂಗಳೂರು(ಜ.28): ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಾವತಿ ಪುತ್ರಿ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡ ಯುವತಿ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಿ. ಎಸ್ ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರು ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ರಾಮಯ್ಯ...
ಮಂಗಳೂರು, ಜ 26 : ಕಳೆದ ಕೆಲವು ದಿನಗಳಿಂದ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್(53) ಅವರು ಜನವರಿ 26 ಬುಧವಾರದಂದು ನಿಧನರಾಗಿದ್ದಾರೆ. ಶೀಲಾ ಅವರ ಸಂಗೀತದ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಆರ್ಯಭಟ ಪ್ರಶಸ್ತಿ ನೀಡಲಾಗಿತ್ತು. ಅವರು ಕಳೆದ 30 ವರ್ಷಗಳಿಂದ ಸಂಗೀತ ಕಲಿಸುತ್ತಿದ್ದು, ವಿದ್ಯಾರ್ಥಿಗಳಿಗೂ ಸಂಗೀತ ಕಲಿಸುತ್ತಿದ್ದರು. ಶೀಲಾ ಅವರು ದಿವಂಗತ ನಾಗರಾಜ್ ರಾವ್ ಮತ್ತು ದಿವಂಗತ ಶ್ರೀಮತಿ ನಾಗರಾಜ್ ಅವರಿಗೆ ಜೂನ್ 28,...
ಸಾಗರ : 5 ವರ್ಷದ ಮಗು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಾಗಾರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೈತೂರು ಬಳಿ ನಡೆದಿದೆ. ಮೃತಪಟ್ಟ ಮಗುವನ್ನು ಕ್ರಿಶಾ (5) ಎಂದು ಗುರುತಿಸಲಾಗಿದೆ. ಸಂಜೆ ಸಮಯದಲ್ಲಿ ಆಟವಾಡಿಕೊಂಡಿದ್ದ ಮಗು ಆಯತಪ್ಪಿ ಬಿದಿದ್ದು, ಕೂಡಲೇ ಮಗುವನ್ನು ಸಾಗರ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮೂರ್ತಿ ಮತ್ತು ರಾಜೇಶ್ವರಿ ದಂಪತಿಗಳ ಎರಡನೇ ಮಗುವಾಗಿರುವ ಕ್ರಿಶಾಳ ಹಠಾತ್ ನಿಧನದಿಂದ...
ಕಾಸರಗೋಡು, ಜ 22 : ಕೊಡುಗೈ ದಾನಿ, ಸಮಾಜ ಸೇವಕ, ಸಾಯಿರಾಂ ಗೋಪಾಲಕೃಷ್ಣ ಭಟ್(85) ಅವರು ಶನಿವಾರ ಮಧ್ಯಾಹ್ನ ಕಿಳಿಂಗಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಾಯಿರಾಂ ಗೋಪಾಲಕೃಷ್ಣ ಅವರು ಜಾತಿ, ಮತ, ಭೇದ ವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265ರಷ್ಟು ನಿರ್ಮಿಸಿ ನೀಡುವ ಮೂಲಕ ಸೇವೆ ನೀಡಿದ್ದರು. ಬಡ ಕುಟುಂಬಗಳಿಗೆ ಮನೆ, ಸ್ವ ಉದ್ಯೋಗಕ್ಕೆ ಸಹಾಯ ನೀಡುತ್ತಿದ್ದರು. ಈಗಾಗಲೇ ಅಲ್ಲದೆ ಅದೆಷ್ಟೋ ಕುಟುಂಬಗಳಿಗೆ ಆರ್ಥಿವಾಗಿಯೂ ಸಹಕಾರ ನೀಡಿದ್ದರು. ಶ್ರೀ ಸತ್ಯ ಸಾಯಿಬಾಬಾ...
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ. ರಾಜು ಅನಾರೋಗ್ಯದಿಂದ ವಿಧಿವಶರಾಗಿದ್ದು, ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತವುಂಟಾಗಿದೆ. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೆ.ವಿ. ರಾಜು, ಬೆಂಗಳೂರಿನ ರಾಜಾಜಿನಗರ ನಿವಾಸದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಂದ್ರಜಿತ್, ಯುದ್ಧಕಾಂಡ, ಬೆಳ್ಳಿ ಮೋಡ, ಹುಲಿಯಾ, ಬೆಳ್ಳಿ ಕಾಲುಂಗುರ, ಸಂಗ್ರಾಮ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ರಾಜಾಜಿನಗರ ನಿವಾಸದಲ್ಲಿಯೇ ಕೆ.ವಿ. ರಾಜು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ...