Sunday, March 8, 2026

ಸಂತಾಪ

ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಬಂಟ್ವಾಳದ ಹಿಂದೂ ಸಂಘಟನೆಯ ಕಾರ್ಯಕರ್ತ ನಿತಿನ್ ಪೂಜಾರಿ ಅನಾರೋಗ್ಯದಿಂದ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ, ಮೇ 15 : ಲಿವರ್ ಸಮಸ್ಯೆಯ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ರೂಪೇಶ್ ಯಾನೆ ನಿತಿನ್ ಪೂಜಾರಿ(೩೦) ಮೃತಪಟ್ಟ ಯುವಕ.‌ ಅವರಿಗೆ ಹೊಟ್ಟೆ ನೋವು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಬಸ್ಸು ಚಾಲಕರಾಗಿ ದುಡಿಯುತ್ತಿದ್ದ ರೂಪೇಶ್ ಅವರು ಅವಿವಾಹಿತರಾಗಿದ್ದರು. ಬಜರಂಗ ದಳ ಸೇರಿದಂತೆ ಇತರ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು....
ಬೆಂಗಳೂರುಮೈಸೂರುರಾಜ್ಯಸಂತಾಪಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ – ಕಹಳೆ ನ್ಯೂಸ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ಧ ಬಲರಾಮ(67) ಆನೆ ಅನಾರೋಗ್ಯದಿಂದ ಮೃತಪಟ್ಟಿದೆ. ಬಲರಾಮ ಅನೆ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಬಲರಾಮ ಎಲ್ಲರ ಕಣ್ಮಣಿಯಾಗಿತ್ತು. ಅತ್ಯಂತ ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಿತ್ತು ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

RSS ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ ನಿಧನ ; ನಾಳೆ (ಮೇ.5) ಬೆಳಿಗ್ಗೆ ಅಂತ್ಯಸಂಸ್ಕಾರ – ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಚೇತನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ , ಸಂಘಟನಾ ಚತುರ ರಾಧಾಕೃಷ್ಣ ಭಕ್ತ (71) ಮೇ.4 ರಂದು ನಿಧನರಾದರು. ಜನಸಂಘದ ಕಾಲದಲ್ಲಿ ಸಕ್ರೀಯರಾಗಿದ್ದು, ತಮ್ಮ ಮನೆಯನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಮಾಡಿಕೊಂಡಿದ್ದ ದಿ. ದೇವದಾಸ್ ಭಕ್ತ ಅವರ ಪುತ್ರ ರಾಧಾಕೃಷ್ಣ ಭಕ್ತ ತನ್ನ ತಂದೆಯ ಮಾರ್ಗದರ್ಶದನಲ್ಲೇ ಮುಂದುವರಿದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು. ಪುತ್ತೂರಿನಲ್ಲಿ...
ಸಂತಾಪಸುದ್ದಿ

‘ದ್ವಿತೀಯ PUC’ ಪರೀಕ್ಷೆಯಲ್ಲಿ ಅನುತ್ತೀರ್ಣ : ಚಾಮರಾಜನಗರದಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ -ಕಹಳೆ ನ್ಯೂಸ್

ಚಾಮರಾಜನಗರ : 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಗ್ರಾಮದ ವಿಜಯಲಕ್ಷ್ಮಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ಫಲಿತಾಂಶ ನೋಡಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಜೆಎಸ್ ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಕಾಣಿಯೂರು ಇಡ್ಯಡ್ಕದಲ್ಲಿ ದೈವ ನರ್ತನದ ವೇಳೆ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ – ಕಹಳೆ ನ್ಯೂಸ್

ಕಾಣಿಯೂರು: ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಇಹಲೋಕ ತ್ಯಜಿಸಿದ ಘಟನೆ ಮಾ.30 ರಂದು ಕಡಬ ತಾಲೂಕಿನ ಕಾಣಿಯೂರು ಸಮೀಪ ದೋಳ್ಪಾಡಿ ಗ್ರಾಮದ ಇಡ್ಯಡ್ಕದಿಂದ ವರದಿಯಾಗಿದೆ. ಖ್ಯಾತ ದೈವ ನರ್ತಕ ಎಡಮಂಗಲ ಗ್ರಾಮದ ಕಾಂತು ಅಜಿಲ ಮೂಲಂಗೀರಿ (ಬಾಬು) (55) ಮೃತರು ಎಂದು ತಿಳಿದು ಬಂದಿದೆ. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.30 ರಂದು ದೋಳ್ಪಾಡಿ ಗ್ರಾಮದ...
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಖ್ಯಾತ ನೃತ್ಯ ಗುರು ದಿ. ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನಾ ವಿ ರೈ ಅವರ ಸುಪುತ್ರಿ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ ನಿಧನ ; ಕಂಬನಿ ಮಿಡಿದ ಕಲಾರಂಗ – ಕಹಳೆ ನ್ಯೂಸ್

ಪುತ್ತೂರು : ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಅವರ ಕಿರಿಯ ಪುತ್ರಿ ಪಡುವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ, ಬಹರೈನ್ ನಲ್ಲಿ ನೆಲೆಸಿದ್ದ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ (46) ಮಾ.7 ರಂದು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಕಲಾವಿದರ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ರೈ ಪದಡ್ಕ ವಿಶ್ವಕಲಾನಿಕೇತನದಲ್ಲಿ ಕಲಿತು ನೃತ್ಯ, ಯಕ್ಷಗಾನದಲ್ಲಿ ಪಳಗಿದ್ದರು. ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ...
ಸಂತಾಪಸುದ್ದಿ

ಮಂಗಳೂರಿನ ಖ್ಯಾತ ವೈದ್ಯ ಕೆ. ಜಯರಾಮ್‌ ಶೆಟ್ಟಿ ಹೃದಯಾಘಾತದಿಂದ ನಿಧನ – ಕಹಳೆ ನ್ಯೂಸ್

ಮಂಗಳೂರು: (Doctor K. jayaram shetty) ಮಂಗಳೂರು ದೇರಳಕಟ್ಟೆಯ ಜಸ್ಟೀಸ್‌ ಕೆ.ಎಸ್.ಹೆಗ್ಡೆ ಚಾರಿಟೇಬಲ್‌ ಆಸ್ಪತ್ರೆಯ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ಕ್ಯಾನ್ಸರ್‌ ವಿಭಾಗದ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುಪುರ ಪರಾರಿ ದೋಟ ಕೊಳಕ್ಕೆಬೈಲು ನಿವಾಸಿ ಡಾ. ಜಯರಾಮ್‌ ಶೆಟ್ಟಿ ( 53 ವರ್ಷ) ನಿಧನರಾಗಿದ್ದಾರೆ. ಡಾ. ಜಯರಾಮ್‌ ಶೆಟ್ಟಿ ಮಂಗಳೂರಿನ ಕೆ.ಎಂ.ಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕ್ಕೋತ್ತರ ಉನ್ನತ ಶಿಕ್ಷಣ ಪಡೆದ...
ದಕ್ಷಿಣ ಕನ್ನಡರಾಜ್ಯಸಂತಾಪಸುದ್ದಿ

ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ ; ಮಂಗಳೂರಿನ ಲೇಡಿಹಿಲ್​ನ ಮನೆಯಲ್ಲಿ ಸಾರಾ ಅಬೂಬಕ್ಕರ್​ ಅವರ ಅಂತಿಮ ದರ್ಶನ – ಇಂದೇ ಅಂತ್ಯಕ್ರಿಯೆ – ಕಹಳೆ ನ್ಯೂಸ್

ಮಂಗಳೂರು: ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್(86) ಅವರು ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರಿನ ಲೇಡಿಹಿಲ್​ನ ಮನೆಯಲ್ಲಿ ಸಾರಾ ಅಬೂಬಕ್ಕರ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಪಿ. ಅಹಮದ್ ಮತ್ತು ಚೈನಾಬಿ ದಂಪತಿಯ ಪುತ್ರಿಯಾಗಿ ಸಾರಾ ಜನಿಸಿದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಕಾಸರಗೋಡಿನಲ್ಲಿ ಪ್ರೌಢಶಿಕ್ಷಣ...
1 26 27 28 29 30 36
Page 28 of 36