Thursday, March 12, 2026

ಸಂತಾಪ

ಉಡುಪಿಸಂತಾಪಸುದ್ದಿ

ಉಡುಪಿ : ಹೃದಯಾಘಾತದಿಂದ ಮೃತಪಟ್ಟ 10ನೇ ತರಗತಿಯ ವಿದ್ಯಾರ್ಥಿನಿ- ಕಹಳೆ ನ್ಯೂಸ್

ಉಡುಪಿ : 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯ ಪಳ್ಳಿ ದಾದಬೆಟ್ಟು ಎಂಬಲ್ಲಿ ಸಂಭವಿಸಿದೆ. ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಮತ್ತು ಚಂದ್ರಿಕಾ ಅವರ ಪುತ್ರಿ ಭಾಗ್ಯಶ್ರೀ (16) ಮೃತ ದುರ್ದೈವಿ. ಈಕೆ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾ ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ...
ಉಡುಪಿಕಾರ್ಕಳಬೆಂಗಳೂರುಸಂತಾಪಸುದ್ದಿ

ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ; ಹಂಸ ಮೊಯ್ಲಿ ವಿಧಿವಶ – ಕಹಳೆ ನ್ಯೂಸ್

ಬೆಂಗಳೂರು/ಕಾರ್ಕಳ: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ ಉಂಟಾಗಿದೆ. ಮೊಯಿಲಿ ಪುತ್ರಿ, ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಅವರು ರವಿವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಅವರು ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ಶೃಂಗಾರಂನಲ್ಲಿ ನಟಿಸಿದ್ದರು....
ಸಂತಾಪಸುದ್ದಿ

ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದ ಮಾಧ್ಯಮ ಲೋಕದ ಭೀಷ್ಮ : ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್‌ – ಕಹಳೆ ನ್ಯೂಸ್ 

ಹೈದರಾಬಾದ್‌: ಮಾಧ್ಯಮ ಲೋಕದ ಭೀಷ್ಮರೆಂದೇ ಪ್ರಖ್ಯಾತಿ ಹೊಂದಿದ್ದ ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್‌(87) ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜೂನ್ 5ರಂದು ಹೈದರಾಬಾದಿನ ನಾನಾಕರಮುಡದ ಸ್ಟಾ‌ರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 8ರಂದು ಬೆಳಗ್ಗೆ 4.50ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಾಮೋಜಿ ರಾವ್‌ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ...
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಅನಾರೋಗ್ಯದಿಂದ ಮೃತಪಟ್ಟ ಬಿಜೆಪಿ ಕಾರ್ಯಕರ್ತ ಕುರ್ಪೆ ನೋಣಯ ಪೂಜಾರಿ ಮನೆಗೆ ಬೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್

ಬಾಳ್ತಿಲ ಗ್ರಾಮದ ಸಕ್ರಿಯ ಬಿಜೆಪಿ ಕಾರ್ಯಕರ್ತರಾದ ಕುರ್ಪೆ ನೋಣಯ ಪೂಜಾರಿಯವರು ಅನಾರೋಗ್ಯದಿಂದ ಮೃತಪಟ್ಟಿದ್ದು ಅವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಆರ್.ಚೆನ್ನಪ್ಪ ಕೋಟ್ಯಾನ್,ಪ್ರಮುಖರಾದ ಶಿವರಾಜ್ ನೀರಪಾದೆ,ರವಿ ಬೈಲ್ ಉಪಸ್ಥಿತರಿದ್ದರು...
ಉಡುಪಿಸಂತಾಪಸುದ್ದಿ

ಉಡುಪಿ: ಹಿರಿಯ ಟೂರಿಸ್ಟ್ ಬಸ್ ಏಜೆಂಟ್ ಸ್ಟ್ಯಾನ್ಲಿ ಸುಧಾಕರ್ ಸಾಲಿನ್ಸ್ ನಿಧನ-ಕಹಳೆ ನ್ಯೂಸ್

ಉಡುಪಿ: ಟೂರಿಸ್ಟ್ ಬಸ್ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಬಸ್ ಏಜೆಂಟ್ ಸ್ನೇಹ ಜೀವಿ ಸ್ಟ್ಯಾನ್ಲಿ ಸುಧಾಕರ್ ಸಾಲಿನ್ಸ್ (53) ನಿಧನರಾಗಿದ್ದಾರೆ. ಕಳೆದ ಐದು ದಿನಗಳ ಹಿಂದೆ ಧೀಢೀರಾಗಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿತ್ತು. ಬಳಿಕ ಅಜ್ಜರಕಾಡು ಅಸ್ಪತ್ರೆಯಲ್ಲಿ ಜೀವಣ್ಮರಣ ಹೋರಾಟದಲ್ಲಿ ದ್ದ ಸುಧಾಕರ್ ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಮುಂಜಾನೆ ದೈವಧೀನರಾದರು. ಕಳೆದ 35 ವರ್ಷಗಳಿಂದ ಉಡುಪಿಯಲ್ಲಿ ಟೂರಿಸ್ಟ್ ಏಜೆಂಟಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಲ್ಲರಿಗೂ...
ದಕ್ಷಿಣ ಕನ್ನಡಬೆಳ್ತಂಗಡಿಸಂತಾಪಸುದ್ದಿ

ಇಹಲೋಕ ತ್ಯಜಿಸಿದ ದ.ಕ ಜಿಲ್ಲೆಯ ಪ್ರಭಾವಿ ನಾಯಕ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ – ಕಹಳೆನ್ಯೂಸ್

ನೆಲ್ಯಾಡಿ: ದ.ಕ ಜಿಲ್ಲೆಯ ಪ್ರಭಾವಿ ನಾಯಕ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೇದೆ ಸುಬ್ಬ ಪೂಜಾರಿ & ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು...
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಉಪ್ಪಿನಂಗಡಿ : ಮಲಗಿದ್ದಲೇ ಹೃದಯಾಘಾತಕ್ಕೆ ಯುವಕ ಬಲಿ-ಕಹಳೆ ನ್ಯೂಸ್

ಉಪ್ಪಿನಂಗಡಿ: ಕೊರೊನಾದ ಬಳಿಕ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಬಲಿಯಾಗುವ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಅದೇ ರೀತಿ ಗಾರೆ ಕೆಲಸಕ್ಕೆ ಹೋಗುವ ಯುವಕನೊಬ್ಬ ಮಲಗಿದ್ದಲೇ ಹೃದಯಾಘಾತಕ್ಕೆ ಸಿಲುಕಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪ ನಡೆದಿದೆ. ನಿನ್ನಿಕಲ್ಲು ನಿವಾಸಿ ದಿ. ಗೋಪಾಲ ಗೌಡರ ಪುತ್ರ 27ರ ಹರೆಯದ ಜನಾರ್ದನ ನಿನ್ನಿಕಲ್ಲು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇದ್ದರು. ಇವರ ತಾಯಿ ತೋಟದ...
ದಕ್ಷಿಣ ಕನ್ನಡಸಂತಾಪಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ : ಸಿಡಿಲು ಸಹಿತ ಭಾರಿ ಮಳೆ : ಅಂಗಳದಲ್ಲಿ ಹರಡಿದ್ದ ಅಡಿಕೆ ಹೆಕ್ಕುವ ವೇಳೆ ಸಿಡಿಲು ಬಡಿದು ನವ ವಿವಾಹಿತ ಯುವಕ ಮೃತ್ಯು -ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸಿಡಿಲಿನ ಆಘಾತಕ್ಕೆ ಸಿಲುಕಿ ನವ ವಿವಾಹಿತ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಹೊಸೊಳಿಕೆ ಎಂಬಲ್ಲಿ ನಡೆದಿದೆ.  ಮೃತಪಟ್ಟವರನ್ನು ಇಲ್ಲಿನ ನಿವಾಸಿ ದಿ. ಬೀರಣ್ಣ ಗೌಡ ಎಂಬವರ ಮಗ ಸೋಮಸುಂದರ (32) ಎಂದು ಗುರುತಿಸಲಾಗಿದೆ. ಇಂದು ಸಂಜೆ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸಿಡಿಲು ಸಹಿತ ಮಳೆ ಸುರಿದಿತ್ತು. ಪರ್ವತ ಮುಖಿ ಬಳಿ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಸೋಮಸುಂದರ್ ಮಳೆ ಬರುವ ಹಿನ್ನಲೆಯಲ್ಲಿ ಅಂಗಳದಲ್ಲಿ ಹರಡಿದ್ದ...
1 19 20 21 22 23 36
Page 21 of 36