ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಂದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಜೆಬಿಎಫ್-ಜಿಎಂಪಿಎಲ್ ಸಮಸ್ಯೆ ಬಗೆಹರಿಸಿದ ಅವಿರತ ಪ್ರಯತ್ನಕ್ಕೆ ಶ್ಲಾಘನೆ : ಮಂಗಳೂರಿನ ಜೆಬಿಎಫ್-ಜಿಎಂಪಿಎಲ್ ಸಮಸ್ಯೆಯನ್ನು 40 ದಿನದಲ್ಲಿ ಬಗೆಹರಿಸಿದ ಮೋದಿ ಸರ್ಕಾರ – ಕಹಳೆ ನ್ಯೂಸ್
ಮಂಗಳೂರು: ಮಂಗಳೂರಿನ ವಿಶೇಷ ಆರ್ಥಿಕ ವಲಯ(ಎಂಎಸ್ಇಝೆಡ್)ದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಕೊಟ್ಟಿದ್ದ ಪಿಡಿಎಫ್ ಉದ್ಯೋಗಸ್ಥರನ್ನು ಜಿಎಂಪಿಎಲ್(ಗೈಲ್) ಕಂಪೆನಿಯಲ್ಲಿ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿ ಬಹುದಿನಗಳ ಗಂಭೀರ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಕಾರಣರಾದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸತತ ಪ್ರಯತ್ನವನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಶ್ಲಾಘಿಸಿದ್ದಾರೆ. ಜೆಬಿಎಫ್-ಜಿಎಂಪಿಎಲ್(ಗೈಲ್) ಸಮಸ್ಯೆಯನ್ನು ಕೇಂದ್ರ ಸರ್ಕಾರವು ಕೇವಲ 40 ದಿನಗಳಲ್ಲಿ ಬಗೆಹರಿಸಿ ಕೊಟ್ಟಿರುವ...






