ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಸನಾತನ ನಾಟ್ಯಾಲಯದ ವತಿಯಿಂದ ವಿದುಷಿ ಸಿಂಚನಾ ಕುಲಾಲ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ -ಕಹಳೆ ನ್ಯೂಸ್
ಮಂಗಳೂರು: ಪ್ರಸ್ತುತ ಸಮಯದಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಭಾರತೀಯ ಶಾಸ್ತ್ರೀಯ ಕಲೆಗಳನ್ನು ಕಲಿಯಬೇಕು. ಈ ಕಲಾಶಿಕ್ಷಣವು ಯುವಜನರಿಗೆ ಸುಂದರವಾದ ಮನಸ್ಸನ್ನು ಕಟ್ಟುವ ತರಬೇತಿಯನ್ನು ನೀಡುತ್ತದೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಹೇಳಿದರು. ಅವರು ಭಾನುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ವಿದುಷಿ ಸಿಂಚನಾ ಕುಲಾಲ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಲೆಯನ್ನು ಸ್ವೀಕರಿಸಿದ ವ್ಯಕ್ತಿಗಳು ಜೀವನದಲ್ಲಿ...







