Recent Posts

Saturday, April 25, 2026

ಮಂಗಳೂರು

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ರಿಕ್ಷಾ ಬಾಡಿಗೆ ದರ ಪರಿಷ್ಕರಣೆ ಹಾಗೂ LPG/CNG ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ -ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಿಕ್ಷಾ ಚಾಲಕರು ಹಾಗೂ ಮಾಲಕರು ಎದುರಿಸುತ್ತಿರುವ ಗಂಭೀರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಮೋಟಾರ್ ಮತ್ತು ಜನರಲ್ ಮಜ್ದೂರು ಸಂಘ (ಬಿಎಂಎಸ್) ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಮನವಿಯ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ ವಹಿಸಿದ್ದರು. ಇತ್ತೀಚಿನ ಜಾಗತಿಕ ಪರಿಸ್ಥಿತಿ ಹಿನ್ನೆಲೆ ಇಂಧನದ ಬೆಲೆ ಏರಿಕೆ ಹಾಗೂ LPG/CNG ಗ್ಯಾಸ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ತಣ್ಣೀರುಬಾವಿ ಸುಲಿಗೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ -ಕಹಳೆ ನ್ಯೂಸ್

ಮಂಗಳೂರು : ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪಣಂಬೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹಾರೀಸ್(33) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕೇಪರ್ಡ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಧಾರ್ಮಿಕ ಸಂಸ್ಕಾರ ಶಿಕ್ಷಣ ಕೇಂದ್ರದ ವಾರ್ಷಿಕ ಸಂಭ್ರಮ -ಕಹಳೆ ನ್ಯೂಸ್

ಮಂಗಳೂರು :ದೇವಾಲಯ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ,ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಇದರ ಒಂದು ಕೇಂದ್ರವಾದ ಕೇಪರ್ಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾಯರ್ಚರಿಸುತ್ತಿರುವ ಮಹಿಷಮರ್ದಿನಿ ಧಾರ್ಮಿಕ ಸಂಸ್ಕಾರ ಶಿಕ್ಷಣ ಕೇಂದ್ರದ ವಾರ್ಷಿಕ ಸಂಭ್ರಮವು ಏಪ್ರಿಲ್ 21.2026 ರಂದು ನಡೆಯಿತು. ಕಲ್ಲಡ್ಕ ಗಣೇಶ್ ಪರೋಹಿತರು ಮಾತಾಪಿತೃ ವಂದನೆ ನಡೆಸಿಕೊಟ್ಟರು. ಅವರನ್ನು ಕಾರ್ಯಕ್ರಮದಲ್ಲಿ ಹೂ, ಹಣ್ಣು, ಹಂಪಲು, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸುಳ್ಯ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು : ಪಕ್ಷಾಂತರ ತಡೆ ಕಾಯ್ದೆ ಮೌಲ್ಯಮಾಪನ; ಒಡಿಶಾದಲ್ಲಿ ಸ್ಪೀಕರ್‌ಗಳ ಮಹತ್ವದ ಸಭೆ: ಯು.ಟಿ. ಖಾದ‌ರ್ -ಕಹಳೆ ನ್ಯೂಸ್   

ಮಂಗಳೂರು :  ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯ ಮೌಲ್ಯಮಾಪನ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕ‌ರ್ ಮೂಲಕ ನೇಮಕಗೊಂಡ 5 ರಾಜ್ಯಗಳ ವಿಧಾನಸಭಾ ಅಧ್ಯಕ್ಷರ ಸಮಿತಿ ಸಭೆ ಒಡಿಶಾದ ಭುವನೇಶ್ವರದಲ್ಲಿ ಎ.22, 23ರಂದು ನಡೆಯಲಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಮುಂಬಯಿಯಲ್ಲಿ ಒಂದು ಸಭೆ ನಡೆದಿತ್ತು. ಇದೀಗ ಎರಡನೇ ಸಭೆ ಒಡಿಶಾದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಒಡಿಶಾ, ಸಿಕ್ಕಿಂ, ಮಹಾರಾಷ್ಟ್ರ, ನಾಗಾಲ್ಯಾಂಡ್‌,...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿಗೆ ದೂರು ನೀಡಿದ ಎಸ್ಪಿ ಕಾಶಿ -ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿ ಸಲೀಂ ಅವರಿಗೆ ಎಸ್ಪಿ ಕಾಶಿ ಅವರು ದೂರು ನೀಡಿದ್ದಾರೆ. ಮಾನಸಿಕ ಕಿರುಕುಳ, ದರ್ಪ ಮತ್ತು ತಾರತಮ್ಯ ವಿರುದ್ಧ ನಿಂತ ಎಸ್ಪಿ ಕಾಶಿ ಅವರು ಡಿಜಿಪಿಗೆ ಪತ್ರ ಬರೆದಿದ್ದಾರೆ. 30 ನಿಮಿಷ ಟೈಮ್ ಕೊಡಿ, ಮಂಗಳೂರು ಕಮಿಷನರ್ ಕರ್ಮಕಾಂಡ ಬಯಲು ಮಾಡುತ್ತೇನೆ. ಅಧಿಕಾರಿಗೆ ಬ್ಯಾಕ್ ಟು ಬ್ಯಾಕ್ ಮೆಮೊ ಕೊಟ್ಟು, ನಾವು ಹೇಳಿದಂತೆ ಕೆಲಸ ಮಾಡಬೇಕು ಇಲ್ಲವಾದರೆ ಮಾನಸಿಕ ಹಿಂಸೆ ಕೊಡ್ತಾರೆ. ಕನ್ನಡಿಗ ಅಧಿಕಾರಿಗಳನ್ನು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳು ಅರೆಸ್ಟ್! -ಕಹಳೆ ನ್ಯೂಸ್

ಮಂಗಳೂರು : ಮಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ವಿದ್ಯಾರ್ಥಿಗಳೇ ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿರೋದು ಪತ್ತೆಯಾಗಿದ್ದು, ಸದ್ಯ ಪೊಲೀಸರು ಐವರು ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಯೊಬ್ಬನ ಪೋಷಕರು ತಮ್ಮ ಪುತ್ರನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ದೊರಕಿದೆ ಎಂದು ಪೊಲೀಸರಿಗೆ ಮಂಗಳವಾರ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯಾರ್ಥಿಯ ಬೆನ್ನು ಬಿದ್ದ ಪೊಲೀಸರಿಗೆ ಐವರು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಪಿಲಿಕುಳ ಮೃಗಾಲಯ ದುರಸ್ತಿ: ಎ. 1ರಿಂದ ಎ. 8 ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿಲ್ಲ -ಕಹಳೆ ನ್ಯೂಸ್

ಮಂಗಳೂರು:  ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಜೈವಿಕ ಉದ್ಯಾನವನದ (ಮೃಗಾಲಯ) ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎ. 1ರಿಂದ ಎ. 8 ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಭೂಗತ ತೈಲಾಗಾರಕ್ಕೆ ಚೀನದಿಂದ ಕಚ್ಚಾ ತೈಲ ತಂದ ಲೀಲಾ ಜಾಮ್ನಗರ್‌ ನೌಕೆ -ಕಹಳೆ ನ್ಯೂಸ್

ಮಂಗಳೂರು: ನವಮಂಗಳೂರು ಬಂದರಿಗೆ ಚೀನದಿಂದ 2.7 ಲಕ್ಷ ಮೆ. ಟನ್‌ ಕಚ್ಚಾ ತೈಲವನ್ನು ಹೇರಿಕೊಂಡು ಲೀಲಾ ಜಾಮ್‌ ನಗರ್‌ ಎನ್ನುವ ಹಡಗು ಆಗಮಿಸಿದೆ. ಇದು ಚೀನದ ಜೌಶಾನ್‌ ಬಂದರಿನಿಂದ ಆಗಮಿಸಿದ್ದು, ಕಚ್ಚಾ ತೈಲವನ್ನು ಮಂಗಳೂರಿನ ಐಎಸ್‌ಪಿಆರ್‌ಎಲ್‌ ಭೂಗತ ತೈಲಾಗಾರಕ್ಕೆ ಪೂರೈಸುವ ನಿರೀಕ್ಷೆ ಇದೆ. ಈಗಾಗಲೇ 19,600 ಮೆ. ಟನ್‌ ಎಲ್‌ಪಿಜಿಯೊಂದಿಗೆ ಅಲ್‌ ಐನ್‌ ಎನ್ನುವ ನೌಕೆಯೂ ಬಂದರಿಗೆ ಬಂದಿದೆ. ಅಲ್ಲದೆ ಎ. 3ರಂದು ಎಂಆರ್‌ಪಿಎಲ್‌ಗೆ 63,171 ಮೆ. ಟನ್‌ ರಾಜಸ್ತಾನದ...
1 2 3 108
Page 1 of 108