Saturday, March 7, 2026

ಕಾರ್ಕಳ

ಉಡುಪಿಕಾರ್ಕಳಜಿಲ್ಲೆಸುದ್ದಿ

ಕಾರ್ಕಳದ ಮಿಯ್ಯಾರಿನಲ್ಲಿ ರಸ್ತೆ ಅಪಘಾತ: ಮೂವರು ಸಾವು- ಕಹಳೆ ನ್ಯೂಸ್

ಕಾರ್ಕಳ (ಉಡುಪಿ): ತಾಲ್ಲೂಕಿನ ಮಿಯ್ಯಾರು ಕಂಬಳ ಕ್ರಾಸ್ ಬಳಿಯ ರಾ‌ಷ್ಟ್ರೀಯ‌ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕ್ರೂಸರ್‌ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಕಲಬುರಗಿ ಕಡೆಯ ತೂಫಾನ್ ವಾಹನವು ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಐವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರ್ಕಳ ಪೊಲೀಸರು‌ ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ....
ಉಡುಪಿಕಾರ್ಕಳಜಿಲ್ಲೆಸುದ್ದಿ

ಗೋ ನಂದಿ ಸೇವಾ ದಳ ಕರ್ನಾಟಕ ಇದರ ರಾಜ್ಯ ಮಹಿಳಾ ಸಂಚಾಲಕಿ ಆಗಿ ಕಾರ್ಕಳದ ಶ್ರೀಮತಿ ರಮಿತಾ ಸೂರ್ಯವಂಶಿ ಆಯ್ಕೆ-ಕಹಳೆ ನ್ಯೂಸ್

ಕಾರ್ಕಳ : ಗೋ ನಂದಿ ಸೇವಾ ದಳ ಕರ್ನಾಟಕ ಇದರ ರಾಜ್ಯ ಮಹಿಳಾ ಸಂಚಾಲಕಿ ಆಗಿ ಕಾರ್ಕಳದ ಶ್ರೀಮತಿ ರಮಿತಾ ಸೂರ್ಯವಂಶಿ ಆಯ್ಕೆ ಆಗಿದ್ದಾರೆ. ಗೋ ಸೇವಾ ಕಾರ್ಯ ಚಟುವಟಿಕೆ ದೇಶಾದ್ಯಂತ ಮಾಡುವ ಉದ್ದೇಶದಿಂದ ಗೋವಿನ ರಕ್ಷಣೆ ಮತ್ತು ಪೋಷಣೆ ಮುಖ್ಯ ವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಯೊಂದು ಜಿಲ್ಲೆಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದ ಅಗತ್ಯ ಇರುದರಿಂದ ತಂಡದ ರಾಜ್ಯ ಮಹಿಳಾ ಸಂಚಾಲಕಿ ಆಗಿ ಕಾರ್ಕಳದ ರಮಿತಾ...
ಕಾರ್ಕಳಜಿಲ್ಲೆಸುದ್ದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ -ಕಹಳೆ ನ್ಯೂಸ್

ಕಾರ್ಕಳ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ರವಿವಾರ ಬೆಳಗ್ಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಶೃಂಗೇರಿಗೆ ಆಗಮಿಸಿದ್ದ ಕೇಂದ್ರ ಸಚಿವರು, ಬಳಿಕ ಅಲ್ಲಿಂದ ನೇರವಾಗಿ ಕಾರ್ಕಳ ಶಾಸಕರ ನಿವಾಸಕ್ಕೆ ಆಗಮಿಸಿದರು. ಶಾಸಕರ ಕುಟುಂಬದವರು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿದರು. ಬಳಿಕ ಕುಶಾಲೋಪಚಾರಿಯಾಗಿ ಸ್ನೇಹ ಮಾತುಕತೆ ನಡೆಸಿದರು. ಈ ಸಂಧರ್ಭದಲ್ಲಿ ಕ್ಷೇತ್ರಧ್ಯಕ್ಷರಾದ ಶ್ರೀ ನವೀನ್ ನಾಯಕ್, ಬಿಜೆಪಿ ಹಿರಿಯರಾದ...
ಕಾರ್ಕಳಜಿಲ್ಲೆಪ್ರಾದೇಶಿಕಸುದ್ದಿ

ಆಯತಪ್ಪಿ ಬಾವಿಗೆ ಬಿದ್ದ ಯುವಕ..! ಜೀವಾಪಾಯದಿಂದ ಪಾರು..!- ಕಹಳೆ ನ್ಯೂಸ್

ಕಾರ್ಕಳ : ಬಾವಿಗೆ ಅಡ್ಡವಾಗಿ ಅಳವಡಿಸಲಾಗಿದ್ದ ಕಂಬ ಮುರಿದುಬಿದ್ದ ಪರಿಣಾಮ ನೀರು ಸೇದುತ್ತಿದ್ದ ವ್ಯಕ್ತಿ ಬಾವಿಯೊಳಗೆ ಬಿದ್ದ ಘಟನೆ ಸಾಣೂರಿನ ಕೆಂಚಬೆಟ್ಟು ಎಂಬಲ್ಲಿ ನಡೆದಿದೆ. ಪ್ರಶಾಂತ್ ಭಂಡಾರಿ ಬಾವಿಗೆ ಬಿದ್ದ ಯುವಕನಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ನ. 24 ರ೦ದು ಯುವಕನ ಮನೆ ಸಮೀಪದಲ್ಲಿ ಈ ಘಟನೆ ಸಂಭವಿಸಿದ್ದು, ಮನೆ ಮಂದಿ ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳದ ಸಿಬ್ಬಂದಿಯರು ಕಾರ್ಯಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ...
ಕಾರ್ಕಳಜಿಲ್ಲೆಸುದ್ದಿ

ಉಡುಪಿ, ದಕ್ಷಿಣ ಕನ್ನಡ ಸಂಘಟನೆಗೆ ಮಾದರಿ: ಬಿ.ವೈ. ವಿಜಯೇಂದ್ರ – ಕಹಳೆ ನ್ಯೂಸ್

ಕಾರ್ಕಳ: 'ಉಡುಪಿ ಹಾಗೂ ದಕ್ಷಿಣ ಕನ್ನಡ ಸಂಘಟನೆಗೆ ಮಾದರಿಯಾಗಿರುವ ಜಿಲ್ಲೆಗಳು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಇಲ್ಲಿನ ಸಾಲ್ಮರದಲ್ಲಿರುವ ಬಿಜೆಪಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು ಮಾತನಾಡಿ, ಯಡಿಯೂರಪ್ಪ ಅವರು ಉಡುಪಿ, ದ.ಕ. ಜಿಲ್ಲೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ನಂತರ ಮೊದಲ ಬಾರಿಗೆ ಕಾರ್ಕಳಕ್ಕೆ ಭೇಟಿ ನೀಡುತ್ತಿದ್ದೇನೆ ಎಂದರು. ಜನರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ‌ ಇದೆ ಎನ್ನುವುದಕ್ಕಿಂತ ಕಾಂಗ್ರೆಸ್‌ನ ಪೊಳ್ಳು...
ಉಡುಪಿಕಾರ್ಕಳಜಿಲ್ಲೆಸಂತಾಪಸುದ್ದಿ

ಕಾರ್ಕಳ: ಅಮ್ಮ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ !-ಕಹಳೆ ನ್ಯೂಸ್

ಕಾರ್ಕಳ : ಅಮ್ಮ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ನೀರು ನಿಂತಿದ್ದ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಮಂತ್‌ನ ಮೊಬೈಲ್‌ ಅನ್ನು ದುರಸ್ತಿಗೆ ನೀಡಲಾಗಿದ್ದು, ಹೊಸ ಮೊಬೈಲ್ ಕೊಡಿಸುವಂತೆ ಅಮ್ಮನಲ್ಲಿ ಹಠ ಹಿಡಿದಿದ್ದ. ಕೆಲ ತಿಂಗಳು ಕಳೆದ ಬಳಿಕ ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಸುರೇಖಾ ಭರವಸೆ ನೀಡಿದ್ದಾಗ್ಯೂ ಆತ ಮನೆಬಿಟ್ಟು ತೆರಳಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ....
ಉಡುಪಿಕಾರ್ಕಳಸುದ್ದಿ

ಮಾರಿಷಸ್‌ನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು-ಕಹಳೆ ನ್ಯೂಸ್

ಮಾರಿಷಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ನಂದನ ಎಸ್. ಭಟ್ ಎಂಬುವವರು ಮೃತಪಟ್ಟಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಳ್ಯಕ್ಕೆ ಅವರ ಮೃತದೇಹ ತರಲು ಸಂಬಂಧಿಕರು ಮತ್ತು ಸಂಸದರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಘಟನೆ ಸೋಮವಾರ ನಡೆದಿದೆ ಎನ್ನಲಾಗಿದ್ದು, ಮೃತದೇಹವನ್ನು ಅಲ್ಲಿನ ಸರಕಾರಿ ವ್ಯವಸ್ಥೆ ಮೂಲಕ ಹಾಗೂ ಇಲ್ಲಿನ ಸರಕಾರದ ಸಹಾಯದಿಂದ...
ಉಡುಪಿಕಾರ್ಕಳಕ್ರೈಮ್ಸುದ್ದಿ

ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಪುತ್ರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ-ಕಹಳೆ ನ್ಯೂಸ್

ಬ್ರಹ್ಮಾವರ : ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾತ್ರಿ ನಡೆದಿದೆ. ಮೃತ ಸುದೀಪ್ ಭಂಡಾರಿ ಹೆಬ್ರಿಯಲ್ಲಿ ವೈನ್ ಶಾಪ್ ನಡೆಸಿಕೊಂಡಿದ್ದು ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಸುದೀಪ್ ಭಂಡಾರಿ ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ....
1 2 3 10
Page 1 of 10