ಕಂಬಳದಲ್ಲಿ ಮೂಡುಬಿದಿರೆ ತಾಲೂಕಿಗೆ 2 “ಕ್ರೀಡಾರತ್ನ” ಪ್ರಶಸ್ತಿ- ಕಹಳೆ ನ್ಯೂಸ್
ಮೂಡುಬಿದಿರೆ : ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡು 2019-20ರಲ್ಲಿ ಕಂಬಳದ ಚಿನ್ನದ ಓಟಗಾರನೆಂದು ದಾಖಲೆಯನ್ನು ನಿರ್ಮಿಸಿ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಉಸೇನ್ ಬೋಲ್ಟ್ ಎಂದೇ ಕರೆಯಲ್ಪಟ್ಟ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮತ್ತು ಇನ್ನೊರ್ವ ಕಂಬಳ ಸಾಧಕ ಪ್ರವೀಣ್ ಕೋಟ್ಯಾನ್ ಅಳಿಯೂರು ಅವರು "ಕ್ರೀಡಾರತ್ನ" ಪ್ರಶಸ್ತಿಗೆ ಆಯ್ಕೆ ಯಾಗಿದ್ದು ಈ ಮೂಲಕ ಇಬ್ಬರು ಓಟಗಾರರು ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯದಲ್ಲಿ ಮೂಡುಬಿದಿರೆ ತಾಲೂಕಿನ...


