ದಕ್ಷಿಣ ಕನ್ನಡ ಜಿಲ್ಲೆಗೆ ಝಿಕಾ ವೈರಸ್ ಆತಂಕ | ಕೇರಳ ಗಡಿಭಾಗದಲ್ಲಿ ಭಾರೀ ಕಟ್ಟೆಚ್ಚರ ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 10 ಚೆಕ್‌ಪೋಸ್ಟ್ – ಕಹಳೆ ನ್ಯೂಸ್
ಮಂಗಳೂರು, ಜುಲೈ 13: ಕೊರೊನಾ ಮಹಾಮಾರಿಯ ನಡುವೆ ಇದೀಗ ಝಿಕಾ ವೈರಸ್ ಆತಂಕ ಶುರುವಾಗಿದೆ. ಕೇರಳದಲ್ಲಿ ಈ ವೈರಸ್‌ನ ಅಟ್ಟಹಾಸ ಶುರುವಾಗಿರುವುದರಿಂದ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಕೇರಳದ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕೊರೊನಾ ಮಹಾಮಾರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇದೀಗ ಕೇರಳದಲ್ಲಿ ಝಿಕಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಝಿಕಾ ವೈರಸ್...







