Friday, March 6, 2026

ಮಂಜೇಶ್ವರ

ಕಾಸರಗೋಡುದಕ್ಷಿಣ ಕನ್ನಡಪುತ್ತೂರುಮಂಜೇಶ್ವರಸುದ್ದಿ

ಬ್ರಹ್ಮಶ್ರೀ ರವೀಶ ತಂತ್ರಿಗಳ ಆರೋಗ್ಯದಲ್ಲಿ ಏರುಪೇರು : ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲು – ಆರೋಗ್ಯದಲ್ಲಿ ಚೇತರಿಕೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ತಂತ್ರಗಳು, ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಬ್ರಹ್ಮಶ್ರೀ ರವೀಶತಂತ್ರಿಗಳ ಆರೋಗ್ಯದಲ್ಲಿ ಏರುಪೇರು ಸಂಭವಿಸಿದ್ದು, ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಅನಾರೋಗ್ಯ ಕಂಡುಬಂದ ಕಾರಣ, ಪುತ್ತೂರಿನ ಡಾ.ಎಂ.ಕೆ. ಪ್ರಸಾದ್ ಅವರು ಆರೋಗ್ಯ ತಪಾಸಣೆ ನಡೆಸಿದಾಗ ವ್ಯತ್ಯಯ ಕಂಡುಬಂದಿದ್ದು, ಆಸ್ಪತ್ರೆಗೆ ದಾಖಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಯಾವುದೇ ಭಯ ಪಡಬೇಕಾದ ಅಗತ್ಯವಿಲ್ಲ ಎಂದು ತಂತ್ರಿಗಳ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ....
ಕಾಸರಗೋಡುಮಂಜೇಶ್ವರಸಂತಾಪಸುದ್ದಿ

ಸರೋವರ ಕ್ಷೇತ್ರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿದ್ದ ‘ದೇವರ ಮೊಸಳೆ’ ಬಬಿಯಾ ಇನ್ನಿಲ್ಲ – ಕಹಳೆ ನ್ಯೂಸ್

ಕಾಸರಗೋಡು : ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದೆ. ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸವಾಗಿದ್ದ ಬಬಿಯಾ "ದೇವರ ಮೊಸಳೆ" ಎಂದೇ ಪ್ರಸಿದ್ಧಿ ಪಡೆದಿತ್ತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು...
ಆರೋಗ್ಯಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

ಕೇರಳದಲ್ಲಿ ಮಂಕಿಫಾಕ್ಸ್ ಎರಡನೇ ಪಾಸಿಟಿವ್ ; ಶನಿವಾರ ಮಂಗಳೂರು ಏರ್ ಪೋರ್ಟ್ ಮೂಲಕ ಆಗಮಿಸಿದ ಯುವಕನಿಗೆ ಮಂಕಿಫಾಕ್ಸ್ ಪಾಸಿಟಿವ್ – ಕಹಳೆ ನ್ಯೂಸ್

ಕಣ್ಣೂರು, ಜು 18 : ಕೇರಳದಲ್ಲಿ ಮಂಕಿಫಾಕ್ಸ್ ಎರಡನೇ ಪಾಸಿಟಿವ್ ಪ್ರಕರಣ ಕಣ್ಣೂರು ಜಿಲ್ಲೆಯಲ್ಲಿ ದೃಢಪಟ್ಟಿದೆ ರಾಜ್ಯ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನೋರ್ವನಿಗೆ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು, ಇಂದು ಬಂದ ಫಲಿತಾಂಶದಲ್ಲಿ ಮಂಕಿಫಾಕ್ಸ್...
ಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನಲ್ಲಿ ಮಂಕಿಫಾಕ್ಸ್ ಲಕ್ಷಣ..? – ಕಹಳೆ ನ್ಯೂಸ್

ಮಂಗಳೂರು, ಜು 18 : ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕಣ್ಣೂರಿಗೆ ಆಗಮಿಸಿದ ಯುವಕನೋರ್ವನಿಗೆ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮಾತ್ರವಲ್ಲದೆ ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ದಾಖಲಾಗಿತ್ತು. ವಿದೇಶದಿಂದ ಶನಿವಾರ ಮಂಗಳೂರು...
ಕಾಸರಗೋಡುಕ್ರೈಮ್ಮಂಜೇಶ್ವರಸುದ್ದಿ

ಕರಾವಳಿ ಜಿಲ್ಲೆಯ ಶಾಲೆಯೊಂದರಿಂದ ಆತಂಕಕಾರಿ ಘಟನೆ ವರದಿ ; ಒಂದು ಶಾಲೆಯ 7 ಮಂದಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಕಹಳೆ ನ್ಯೂಸ್

ಕಾಸರಗೋಡು : ಒಂದೇ ಶಾಲೆಯ 7 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕರಾವಳಿ ಜಿಲ್ಲೆ ಕಾಸರಗೋಡಿನ ಬೇಕಲ ಎಂಬಲ್ಲಿ ನಡೆದಿದೆ. ಈ ಕುರಿತು ಡಿವೈಎಸ್‌ಪಿ ಸಿ.ಕೆ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡಿದೆ. ಮೂವರು ವಿದ್ಯಾರ್ಥಿಗಳು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಬೇಕಲ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ....
ಕಾಸರಗೋಡುಬದಿಯಡ್ಕಮಂಜೇಶ್ವರಸಂತಾಪಸುದ್ದಿ

265ರಷ್ಟು ಮನೆಗಳನ್ನು ನಿರ್ಮಿಸಿ ಕೊಡುಗಡೆ ನೀಡಿದ್ದ ಕಾಸರಗೋಡಿನ ಕೊಡುಗೈ ದಾನಿ, ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ನಿಧನ – ಕಹಳೆ ನ್ಯೂಸ್

ಕಾಸರಗೋಡು, ಜ 22 : ಕೊಡುಗೈ ದಾನಿ, ಸಮಾಜ ಸೇವಕ, ಸಾಯಿರಾಂ ಗೋಪಾಲಕೃಷ್ಣ ಭಟ್(85) ಅವರು ಶನಿವಾರ ಮಧ್ಯಾಹ್ನ ಕಿಳಿಂಗಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಾಯಿರಾಂ ಗೋಪಾಲಕೃಷ್ಣ ಅವರು ಜಾತಿ, ಮತ, ಭೇದ ವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265ರಷ್ಟು ನಿರ್ಮಿಸಿ ನೀಡುವ  ಮೂಲಕ ಸೇವೆ ನೀಡಿದ್ದರು. ಬಡ ಕುಟುಂಬಗಳಿಗೆ ಮನೆ, ಸ್ವ ಉದ್ಯೋಗಕ್ಕೆ ಸಹಾಯ ನೀಡುತ್ತಿದ್ದರು. ಈಗಾಗಲೇ ಅಲ್ಲದೆ ಅದೆಷ್ಟೋ ಕುಟುಂಬಗಳಿಗೆ ಆರ್ಥಿವಾಗಿಯೂ ಸಹಕಾರ ನೀಡಿದ್ದರು. ಶ್ರೀ ಸತ್ಯ ಸಾಯಿಬಾಬಾ...
ಉಡುಪಿಕಾಸರಗೋಡುದಕ್ಷಿಣ ಕನ್ನಡಮಂಜೇಶ್ವರಸುದ್ದಿ

Breaking News : ಉಗ್ರರು ನುಸುಳಿರುವ ಶಂಕೆ ; ಕೇರಳ-ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್‌..! ಗಡಿಗಳಲ್ಲೂ ಬಿಗಿ ಭದ್ರತೆ – ಕಹಳೆ ನ್ಯೂಸ್

ಮಂಗಳೂರು: ಶ್ರೀಲಂಕಾದಿಂದ ಶಂಕಿತ ಉಗ್ರರು ಒಳನುಸುಳಿರುವ ಶಂಕೆಯಾಗಿದ್ದು, ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್​ನ್ನ ಘೋಷಿಸಲಾಗಿದೆ. ಶ್ರೀಲಂಕಾದಿಂದ 2 ಯಾಂತ್ರೀಕೃತ ಬೋಟ್​ನಲ್ಲಿ ಕೇರಳ ಮತ್ತು ಕರಾವಳಿಗೆ ಶಂಕಿತ ಉಗ್ರರು ಬಂದಿಳಿದಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಶಂಕಿತರು ಕೇರಳದ ಅಲಪ್ಲುಳ ಬಂದರಿಗೆ ತಲುಪಿರುವ ಮಾಹಿತಿಯನ್ನ ಗುಪ್ತಚರ ಇಲಾಖೆಗೆ ರವಾನಿಸಿದೆ. ಪಾಕಿಸ್ತಾನಕ್ಕೆ ತೆರಳಲು ಕರಾವಳಿ ಭಾಗಕ್ಕೆ, 12 ಮಂದಿ ಶ್ರೀಲಂಕಾದ ಶಂಕಿತ ಉಗ್ರರು ಬಂದಿರೋ ಶಂಕೆಯಿದೆ ಎನ್ನಲಾಗಿದೆ. ಕೇರಳ ಅಥವಾ...
ಕಾಸರಗೋಡುದಕ್ಷಿಣ ಕನ್ನಡಬೆಂಗಳೂರುಮಂಜೇಶ್ವರರಾಜ್ಯಸುದ್ದಿ

ಕರ್ನಾಟಕದ ಗಡಿನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಜಯದೇವಿ ತಾಯಿ ಲಿಗಾಡೆರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಗಡಿನಾಡಿನ ಹೋರಾಟಗಾರರಾದ ಕಯ್ಯಾರ ಕಿಞ್ಞಣ್ಣ ರೈ ಹಾಗೂ ಜಯದೇವಿ ತಾಯಿ ಲಿಗಾಡೆರವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಆರ್ಥಿಕ ವರ್ಷದ ಪ್ರಥಮ ಪ್ರಾಧಿಕಾರ ಸಭೆಯಲ್ಲಿ ಹಲವಾರು ಕನ್ನಡಪರ ಕನ್ನಡ ನಾಡು-ನುಡಿ ಸಂಸ್ಕೃತಿ ಪರ ಯೋಜನೆಗಳನ್ನು...
1 2 3 4
Page 2 of 4