ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ ; ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್ ಪ್ಲ್ಯಾನ್?-ಕಹಳೆ ನ್ಯೂಸ್
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಆರಂಭದಿಂದಲೂ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಶುಕ್ರವಾರ (ಸೆ.19) ಮಹೇಶ್‌ಶೆಟ್ಟಿ ತಿಮರೋಡಿ ಆರೋಪಿ ಚಿನ್ನಯ್ಯನ ಜೊತೆ ಮಾತನಾಡಿದ್ದ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದರು. ಇದೀಗ ಅದರ ಮುಂದುವರಿದ ಭಾಗ ಬಹಿರಂಗಗೊಂಡಿದೆ. 2 ವರ್ಷಗಳ ಹಿಂದೆ 2023ರ ಆಗಸ್ಟ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಚಿನ್ನಯ್ಯ ಭೇಟಿಯಾಗಿದ್ದ ವಿಡಿಯೋ ಇದ್ದಾಗಿದ್ದು, ಶುಕ್ರವಾರ ರಿಲೀಸ್ ಮಾಡಿದ್ದ ವಿಡಿಯೋದ ಮುಂದುವರಿದ ಭಾಗವಿದು. ವಿಡಿಯೋದಲ್ಲಿ ಆರೋಪಿ ಚಿನ್ನಯ್ಯ ಸ್ಟಾಟ್...







