ಬಂಟ್ವಾಳದ ಪುರಸಭೆಯ ಆರೋಗ್ಯ ಅಧಿಕಾರಿ ಪತ್ರ ಬರೆದು ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್
ಬಂಟ್ವಾಳ: ಸರಕಾರಿ ಉದ್ಯೋಗಿಯೋರ್ವರು ಗುರುವಾರ ಬೆಳಿಗ್ಗೆ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇವರು ಬಂಟ್ವಾಳ ಪುರಸಭೆಯ ಹೆಲ್ತ್ ಆಫೀಸರ್, ವಿಟ್ಲ ಪುಣಚ ನಿವಾಸಿ ರವಿಕೃಷ್ಣ ಎಂದು ತಿಳಿದುಬಂದಿದೆ. ಇವರು ಸುಳ್ಯ ಪುರಸಭೆಯಿಂದ ಕಳೆದ 5 ತಿಂಗಳ ಹಿಂದೆಯಷ್ಟೆ ಬಂಟ್ವಾಳ ಪುರಸಭೆಗೆ ಆಗಮಿಸಿದ್ರು. ಮೇಲಾಧಿಕಾರಿಗಳ ಮಾನಸಿಕ ಹಿಂಸೆಯನ್ನು ತಾಳಲಾರದೆ ರವಿಕೃಷ್ಣ ಅವರು ಬೇಸರಗೊಂಡು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಪತ್ರ ಬರೆದಿಟ್ಟು, ಮೇಲ್ಕಾರ್ ನಲ್ಲಿ ವಿಷ ಪದಾರ್ಥ...







