ಬಂಟ್ವಾಳ : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ದೇವಸ್ಯ ಮೂಡೂರು ಗ್ರಾಮದ ಸೀತಾ ಅವರಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ಮಂಜೂರುಗೊಂಡ 25,772/- ರೂಪಾಯಿ ಮತ್ತು ಮಣಿನಾಲ್ಕೂರು ಗ್ರಾಮದ ಚಂದ್ರಹಾಸ ಅವರಿಗೆ ಮಂಜೂರುಗೊಂಡ 45,891/- ರೂಪಾಯಿ ಚೆಕ್ಕುಗಳನ್ನು ಗುರುವಾರ ತಮ್ಮ ಶಾಸಕರ ಕಛೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಸರಪಾಡಿ ಪಂಚಾಯತ್ ಸದಸ್ಯರಾದ ರಾಮಕೃಷ್ಣ ಮಯ್ಯ, ಶರ್ಮಿತ್ ಜೈನ್, ಧರಣೇಂದ್ರ ಜೈನ್, ಕಾವಳಮೂಡೂರು ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು....
ಬಂಟ್ವಾಳ : ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಅರಳ ಮತ್ತು ಕೊಯಿಲ ಗ್ರಾಮದ ಗ್ರಾಮದೇವತೆ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಮಹಾ ರಥೋತ್ಸವ ನಡೆಯಿತು. ಕಳೆದ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ಮೂಲಕ ಜಾತ್ರೆ ಆರಂಭಗೊಂಡು, ನಡುಬಲಿ ಉತ್ಸವ, ಚಂದ್ರ ಮಂಡಲೋತ್ಸವ, ಯಕ್ಷಗಾನ ಬಯಲಾಟ, ಭಜನೆ, ರಂಗಪೂಜೆ, ಚಂಡಿಕಾಯಾಗ, ಧೂಮಾತಿ ದೈವದ ನೇಮೋತ್ಸವ ಸಹಿತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಾರ...
ಬಂಟ್ವಾಳ : ಇಲ್ಲಿನ ಬೋಳಂತೂರು ನಿವಾಸಿ, ಕಾಂಗ್ರೆಸ್ ಮುಖಂಡ ಬೋಳಂತೂರು ಚಂದ್ರಹಾಸ ಶೆಟ್ಟಿ (66) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಬೀಡಿ ಉದ್ಯಮಿಯಾಗಿ, ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಬಿ.ಸಿ.ರೋಡು ಪೆÇಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದ್ದರು....
ಬಂಟ್ವಾಳ : ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ರೂ 2 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಇಂದು ದೇವಿಗೆ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಗಂಟೆ 8.16ರ ಶುಭ ಸುಮುಹೂರ್ತ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಗಣಪತಿ, ಶ್ರೀ ಶಾಸ್ತಾರ, ಪರಿವಾರ ದೈವ,...
ಬಂಟ್ವಾಳ : ಕಾಂಗ್ರೇಸ್ ಮುಖಂಡ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಬೋಳಂತೂರು ಅವರು ಇಂದು ಬೆಳಿಗ್ಗೆ 7 ಗಂಟೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿಯೇ ಇದ್ದು, ಇಂದು ಅವರು ಮೃತರಾಗಿದ್ದಾರೆ. ಇವರು ಸಾಮಾಜಿಕವಾಗಿ ರಾಜಕೀಯ ವಾಗಿ, ಶೈಕ್ಷಣಿಕವಾಗಿ ಜೊತೆಗೆ ಧಾರ್ಮಿಕವಾಗಿ ಹೆಚ್ಚುಗುರುತಿಸಿ ಕೊಂಡಿದ್ದರು. ಬಿಸಿರೋಡಿನ ಪೋಲೀಸ್ ಲೇನ್‍ನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದ ನಿರ್ಮಾಣ ಹಾಗೂ ಬ್ರಹ್ಮ ಕಲಶದ ಉಸ್ತುವಾರಿ ವಹಿಸಿದ್ದ ಇವರು, ಬೋಳಂತೂರು ಕೊಡಿಯಡ್ತಾಯಿ...