ಬಜರಂಗದಳ ಸುರತ್ಕಲ್ ಪ್ರಖಂಡ ನೀಡಿದ ಮಾಹಿತಿಯಂತೆ ಕೃಷ್ಣಾಪುರದ ಸುಸಜ್ಜಿತ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ : ಮೂವರು ಆರೋಪಿಗಳು ಪರಾರಿ – ಕಹಳೆ ನ್ಯೂಸ್
ಬಜರಂಗದಳ ಕಾರ್ಯಕರ್ತರು ಮತ್ತು ಸುರತ್ಕಲ್ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ 16ಕ್ಕೂ ಅಧಿಕ ಗೋವುಗಳ ರಕ್ಷಣೆ ಸುರತ್ಕಲ್: ಕೃಷ್ಣಾಪುರ 8ನೇ ಬ್ಲಾಕ್ ಬಳಿ ಭಾರೀ ಅಕ್ರಮ ಕಸಾಯಿಖಾನೆಯೊಂದು ಪತ್ತೆಯಾಗಿದ್ದು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಸುಸಜ್ಜಿತ ಕಾಂಕ್ರಿಟ್ ಮನೆಯೊಂದರಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸವನ್ನಾಗಿ ಪರಿವರ್ತಿಸಿ ಸ್ಥಳೀಯ ಹೋಟೆಲ್ ಸಹಿತ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿದಾಗ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. 16ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಲಾಗಿದೆ. ವಿಶ್ವ ಹಿಂದೂ...







