ಮಂಗಳೂರು :ಶ್ರೀ ಭುವನೇಂದ್ರ ಹಾಲ್ನಲ್ಲಿ ಕೆನರಾ ನಂದಗೋಕುಲ್ ಹುಲಿಯ ದಿನಾಚರಣೆ : ಹುಲಿವೇಷ ಧರಿಸಿ ಗಮನ ಸೆಳೆದ ಮಕ್ಕಳು -ಕಹಳೆ ನ್ಯೂಸ್
ಮಂಗಳೂರು : ಕೆನರಾ ನಂದಗೋಕುಲ್ ತಂಡವು ಶ್ರೀ ಭುವನೇಂದ್ರ ಸಭಾಭವನದಲ್ಲಿ ಹುಲಿಯ ದಿನವನ್ನು ವಿಜೃಂಭಣೆಯಿಂದ ಆಚರಿಸಿತು. ಮಕ್ಕಳು ಹುಲಿವೇಷ ಧರಿಸಿ ಎಲ್ಲರ ಗಮನ ಸೆಳೆದರು. ಕೆಲವು ಮಕ್ಕಳು ಹುಲಿಗಳ ಬಗ್ಗೆ ಭಾವನಾತ್ಮಕ ಭಾಷಣಗಳನ್ನು ನೀಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ "ಹುಲಿಗಳನ್ನು ರಕ್ಷಿಸಿ, ಪ್ರಕೃತಿಯನ್ನು ಉಳಿಸಿ" ಎಂಬ ಘೋಷಣೆ ಕೇಳಿಬಂತು. ಪುಣ್ಯಕೋಟಿ ಎಂಬ ಪ್ರಸಿದ್ಧ ನಾಟಕವನ್ನು ಮಕ್ಕಳು ಅಭಿನಯ ಮಾಡಿ, ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ನೈತಿಕ ಪಾಠವನ್ನೂ...







