50 ರೂಪಾಯಿಗೆ ಏರಿಕೆಯಾದ ತೆಂಗಿನ ಕಾಯಿ ಬೆಲೆ ; ರೈತರಿಗೆ ಪ್ರಯೋಜನಕ್ಕೆ ಬಾರದ ಬೆಲೆ ಏರಿಕೆ – ಕಹಳೆ ನ್ಯೂಸ್
ಉಡುಪಿ ಸೆಪ್ಟೆಂಬರ್ 28 : ತೆಂಗಿನ ಕಾಯಿ ಬೆಲೆ ಇದೀಗ ಡಬಲ್ ಆಗಿದೆ. ಕೆಲವು ತಿಂಗಳ ಹಿಂದೆ 25 ರೂಪಾಯಿಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಇದೀಗ 50 ರೂಪಾಯಿಗೆ ಏರಿಕೆಯಾಗಿದೆ ಆದರೆ ರೈತನಿಗೆ ಮಾತ್ರ ಇದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸೆಪ್ಟಂಬರ್ ತಿಂಗಳ ಆರಂಭದಿಂದಲೇ ತೆಂಗಿನ ಕಾಯಿಗೆ ಬೇಡಿಕೆ ವ್ಯಕ್ತವಾಗಿದೆ. ಅದರ ಜೊತೆಗೆ ಕೊಬ್ಬರಿ, ಕೊಬ್ಬರಿ ಎಣ್ಣೆಗೂ ಬೇಡಿಕೆ ಬಂದಿದೆ. ಹೀಗಾಗಿ ಕೊಬ್ಬರಿ, ತೆಂಗಿನ ಕಾಯಿ ಬೆಲೆಯಲ್ಲೂ ದಿಢೀರ್ ಏರಿಕೆ ಕಂಡುಬಂದಿದ್ದು, ರೈತರು...







