ಮಾನವನ ದುರಾಸೆ ಪರಿಸರ ನಾಶಕ್ಕೆ ಮುಖ್ಯ ಕಾರಣ: ಡಾ. ವಿನಾಯಕ ಕೆ.ಎಸ್ -ಕಹಳೆ ನ್ಯೂಸ್
ಮಂಗಳೂರು, ಮಾ.7: ಮಾನವ ತನ್ನ ಅವಶ್ಯಕತೆಗಳಿಗಾಗಿ ಪರಿಸರವನ್ನು ಅವಲಂಬಿಸಿ ಪ್ರವಾಸೋದ್ಯಮ, ಮನರಂಜನೆ ಸೇರಿದಂತೆ ನಾನಾ ಕಾರಣಗಳಿಗಾಗಿ ಪರಿಸರದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಸ್ವಾರ್ಥಕ್ಕಾಗಿ ಪರಿಸರ ಬಳಸಿಕೊಳ್ಳುವುದರಿಂದ ಪರಿಸರದ ಸ್ಥಿತಿ ಹದಗೆಟ್ಟಿದೆ ಎಂದು ಬಂಟ್ವಾಳ ಎಸ್ವಿಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಕೆ. ಎಸ್. ಆತಂಕ ವ್ಯಕ್ತಪಡಿಸಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶ ವತಿಯಿಂದ ನಡೆದ ಪರಿಸರ ಮತ್ತು ಜೀವವೈವಿಧ್ಯ...







