ಕಮಿಷನ್ ಆಸೆಗೆ 5 ಸ್ಟಾರ್ ರೇಟಿಂಗ್ ಕೊಟ್ಟು, 20 ಲಕ್ಷ ಕಳೆದುಕೊಂಡ ವ್ಯಕ್ತಿ – ಕಹಳೆ ನ್ಯೂಸ್
ಮಂಗಳೂರು: ಹೋಟೆಲ್, ರೆಸ್ಟೋರೆಂಟ್ ಜಾಹೀರಾತುಗಳಿಗೆ ಆನ್‌ಲೈನ್‌ನಲ್ಲಿ 5 ಸ್ಟಾರ್ ರೇಟಿಂಗ್ ನೀಡಿದರೆ ಕಮಿಷನ್ ಸಿಗುತ್ತದೆ ಎಂಬ ಆಸೆಯಿಂದ ವ್ಯಕ್ತಿಯೊಬ್ಬರು ಆನ್‌ಲೈನ್ ವಂಚನೆಗೆ ಒಳಗಾಗಿ ₹ 20.62 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 'ಇನ್‌ಸ್ಟಾಗ್ರಾಮ್‌ನಲ್ಲಿ ಮನೆಯಲ್ಲೇ ಕಲಸ ಮಾಡುವ ಹಾಗೂ ಅರೆಕಾಲಿಕ ಉದ್ಯೋಗದ ಕುರಿತ ಜಾಹಿರಾತನ್ನು ಮೇ 6ರಂದು ನೋಡಿದ್ದೆ. ಅದರಲ್ಲಿದ್ದ ವಾಟ್ಸ್ ಆಯಪ್ ಸಂಖ್ಯೆಯನ್ನು ಸಂಪರ್ಕಿಸಿದಾಗ, ಮೂರು...







