ಸಂಸ್ಕಾರ ಭಾರತೀ ಯಿಂದ ನಟರಾಜ ಪೂಜನ್, ಉಪನ್ಯಾಸ..ಅಭಿನಂದನೆ ಕಾರ್ಯಕ್ರಮ ; ಕಲೆಯ ಅರಿವಿಗೆ ಪುರಾಣ ಜ್ಞಾನ ಅಗತ್ಯ – ಎಂ ಎಲ್ ಸಾಮಗ-ಕಹಳೆ ನ್ಯೂಸ್
ಮಂಗಳೂರು: ಭಾರತೀಯ ಕಲಾಪ್ರಕಾರಗಳ ಸಾಧನೆಗಾಗಿ ನಮ್ಮ ಪುರಾಣಗಳ ಹಿನ್ನೆಲೆ ಅತ್ಯಗತ್ಯ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ಕಲಾಚಿಂತಕರೂ ಆದ ಡಾ.ಎಂ.ಎಲ್. ಸಾಮಗ ಹೇಳಿದರು. ಅವರು ಮಂಗಳವಾರ ಮಂಗಳೂರಿನ ಸಂಸ್ಕಾರ ಭಾರತಿ ಮಂಗಳೂರು ಮಹಾನಗರ ಘಟಕದ ವತಿಯಿಂದ ಮಂಗಳವಾರ ಸನಾತನ ನಾಟ್ಯಾಲಯದಲ್ಲಿ ನಡೆದ ನಟರಾಜ ಪೂಜನ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭಾರತೀಯ ತತ್ತ್ವಶಾಸ್ತ್ರವನ್ನು ಪ್ರತಿನಿಧಿಸುವ ನಟರಾಜ ವಿಗ್ರಹವೇ ನಮ್ಮದೇಶದಕಲಾ ಶ್ರೀಮಂತಿಕೆಯನ್ನೂ ತತ್ವಶಾಸ್ತ್ರದ ಸಮಗ್ರತೆಯನ್ನೂ ತೋರಿಸಿಕೊಡುತ್ತದೆ ಎಂದರು. ಜ್ಞಾನಕ್ಕಾಗಿ ಈಶ್ವರನೂ,ಆರೋಗ್ಯಕ್ಕಾಗಿ ಸೂರ್ಯನನ್ನು...







