ಖ್ಯಾತ ರಿಯಾಲಿಟಿ ಶೋ ಮಹಾನಟಿ ಸೀಸನ್-2ರಲ್ಲಿ ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ವಂಶಿ
ಮಂಗಳೂರು: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಖ್ಯಾತ ರಿಯಾಲಿಟಿ ಶೋ ಮಹಾನಟಿ ಸೀಸನ್ ಎರಡರ ವಿಜೇತೆಯಾಗಿ ಮಂಗಳೂರಿನ ವಂಶಿ ಹೊರ ಹೊಮ್ಮಿದ್ದಾರೆ. ಸೀಸನ್ ಆರಂಭವಾದಗಿನಿಂದಲೂ ನಟನಾ ಚಾತುರ್ಯ ಮೆರೆಯುತ್ತಿದ್ದ ವಂಶಿ ಚಿನ್ನದ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್‌ಗಳಾಗಿದ್ದರು.ಅಂತಿಮವಾಗಿ ಮಂಗಳೂರಿನ ವಂಶಿ ಗೆದ್ದಿದ್ದಾರೆ. ವೈಟ್ ಗೋಲ್ಡ್ ವತಿಯಿಂದ ಅವರಿಗೆ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ...







