ಹಿಂದೂ ಸಮಾಜದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡರನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ – ಕಹಳೆ ನ್ಯೂಸ್
ಮಂಗಳೂರು: ಬಿ.ಸಿ. ರೋಡ್ ನಲ್ಲಿ ಹಿಂದೂ ಸಮಾಜದವರನ್ನು ಕೆಣಕುವ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಭಂಗ ತರಲು ಯತ್ನಿಸಿರುವ ಕಾಂಗ್ರೆಸ್ನ ಮಾಜಿ ಪುರಸಭೆ ಅಧ್ಯಕ್ಷರು ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಕೂಡಲೇ ಬಂಧಿಸಿ ರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ. ಬಿ.ಸಿ. ರೋಡ್ ನಲ್ಲಿ ಕೋಮು ಸರ್ಷ ಸೃಷ್ಟಿಸುವುದಕ್ಕೆ ಯತ್ನಿಸಿರುವ ಕಾಂಗ್ರೆಸ್ನವರ ಕುತಂತ್ರವನ್ನು ತೀವ್ರವಾಗಿ ಖಂಡಿಸಿರುವ ಕ್ಯಾ. ಚೌಟ...






