Friday, March 13, 2026

ಮಂಗಳೂರು

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ವಿವಿ ಕಾಲೇಜಿನಲ್ಲಿ ʼಪರಿಸರ ಅಧ್ಯಯನʼ ಪುಸ್ತಕ ಬಿಡುಗಡೆ-ಕಹಳೆ ನ್ಯೂಸ್

ಮಂಗಳೂರು : ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ʼಪರಿಸರ ಅಧ್ಯಯನʼ ಎಂಬ ಕನ್ನಡ ಪುಸ್ತಕವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಬಿಡುಗಡೆ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ಅನುಗುಣವಾಗಿ ಡಾ. ಸಿದ್ದರಾಜು ಎಂ. ಎನ್. ಮತ್ತು ಡಾ. ವಿನಾಯಕ ಅವರು ರಚಿಸಿದ್ದಾರೆ. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ, ವಿದ್ಯಾರ್ಥಿಗಳಿಗೆ ತಾವು ಮಾತನಾಡುವ ಭಾಷೆಯಲ್ಲಿ ಅಧ್ಯಯನ ಮಾಡುವ ಅವಕಾಶ...
ದಕ್ಷಿಣ ಕನ್ನಡಬೆಂಗಳೂರುಬೆಳ್ತಂಗಡಿಮಂಗಳೂರುರಾಜ್ಯಸುದ್ದಿ

ಸೌಜನ್ಯ ಪ್ರಕರಣ : ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಏ.6ರ ಹಕ್ಕೊತ್ತಾಯ ಸಭೆಗೆ ಆರಂಭದಲ್ಲಿ ಹೈಕೋರ್ಟ್ ಅನುಮತಿ : ವಾಟ್ಸಪ್ ಸಂದೇಶಗಳ ಗಂಭೀರತೆಯರಿತು ತಾತ್ಕಾಲಿಕ ತಡೆ – ಕಹಳೆ ನ್ಯೂಸ್

ಪುತ್ತೂರು:ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏ.೬ರಂದು ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಬೃಹತ್ ಹಕ್ಕೊತ್ತಾಯ ಸಭೆ, ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಆರಂಭದಲ್ಲಿ ಅನುಮತಿ ನೀಡಿದ್ದರೂ, ಈ ಸಂಬಂಧ ವಾಟ್ಸಪ್ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳ ಗಂಭೀರತೆಯರಿತ ನ್ಯಾಯಪೀಠ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಮೊದಲು , ನ್ಯಾಯಾಲಯ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿತ್ತು. ಆದರೆ ಹೊಸ ವಾಟ್ಸಾಪ್ ಸಂದೇಶಗಳು ಬಹುಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡು ದೇವಸ್ಥಾನದಲ್ಲಿ ಪ್ರವೇಶಿಸುವ ಯತ್ನಗಳ ಬಗ್ಗೆ ಸೂಚನೆ ನೀಡಿವೆ. ಹೀಗಾಗಿ,...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಎ.4-6 ರವರೆಗೆ ಮಂಗಳೂರಿನಿಂದ ಮಧೂರಿಗೆ ಕೆಎಸ್ಸಾರ್ಟಿಸಿ‌ ವಿಶೇಷ ಬಸ್- ಕಹಳೆ ನ್ಯೂಸ್

ಮಂಗಳೂರು: ಮಧೂರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಂಗಳೂರು-ಮಧೂರು ನಡುವೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಈ ವಿಶೇಷ ಬಸ್ ಸೇವೆಯು ಎ.4 ರಿಂದ ಎ.6ರವರೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಬಸ್ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮಧೂರಿಗೆ ಬೆಳಗ್ಗೆ 10 ಗಂಟೆಗೆ ಮತ್ತು‌ 10.20ಕ್ಕೆ ಹೊರಡಲಿದೆ. ಮಧೂರಿನಿಂದ ಮಂಗಳೂರಿಗೆ 1.30 ಮತ್ತು 1.45ಕ್ಕೆ‌ಹೊರಡಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ....
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬೆಂಗಳೂರುಮಂಗಳೂರುರಾಜ್ಯಸುದ್ದಿ

ಉಪ್ಪಿನಂಗಡಿ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ; ಓರ್ವ ಮೃತ್ಯು, ಹತ್ತಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ – ಕಹಳೆ ನ್ಯೂಸ್

ಉಪ್ಪಿನಂಗಡಿ ಏ.04  : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, ಹತ್ತಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೀರಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ನೀರಕಟ್ಟೆಯ ಅಪಾಯಕಾರಿ ತಿರುವನ್ನು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಬಸ್ಸಿನಡಿ ಸಿಲುಕಿ ಮೃತಪಟ್ಟಿದ್ದು, ಹತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಏ.6 ರಂದು ಮಂಗಳೂರು ಪುರಭವನದಲ್ಲಿ ಸನಾತನ ನೃತ್ಯ ಪ್ರೇರಣ ಮತ್ತು ಭರತನಾಟ್ಯ ಕಾರ್ಯಕ್ರಮ -ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ಏಪ್ರಿಲ್ 6 ಬಾನುವಾರ ಸಂಜೆ 6 ಗಂಟೆಗೆ ಸನಾತನ ನೃತ್ಯ ಪ್ರೇರಣಾ ಮತ್ತು ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯ ನಡೆಸಿದ 2024 ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯನ್ನು ತೇರ್ಗಡೆ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ಸಿಂಚನಾ ಎಸ್ ಕುಲಾಲ್,ವಿಜಿತಾ ಕೆ ಶೆಟ್ಟಿ,ವೈಷ್ಣವಿ ತಂತ್ರಿ,ಜಾಹ್ನವಿ ಎಸ್ ಶೇಖ,ಧೃತಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರು

ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ನಿಂದ ಗೀತಾ ಬಾಯಿಗೆ ಆರ್ಥಿಕ ನೆರವು -ಕಹಳೆ ನ್ಯೂಸ್

ಮಂಗಳೂರು:ಡ್ರಾಮೆನ್ ನಾರ್ವೆಯಲ್ಲಿ ನಡೆಯಲಿರುವ ವಿಶ್ವ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಗೀತಾ ಬಾಯಿ ಅವರಿಗೆ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ವತಿಯಿಂದ ಆರ್ಥಿಕ ಸಹಾಯದ ಚೆಕ್ ಅನ್ನು ಸಂಸ್ಥೆಯ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈಯವರು ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾಪಟು ಗೀತಾ ಬಾಯಿ ಡ್ರಾಮೆನ್ ನಾರ್ವೆಯಲ್ಲಿ ನಡೆಯುವ ಈ ಸ್ಪರ್ಧಾ ಕೂಟದಲ್ಲಿ ಭಾಗವಹಿಸಲು ನಾಲ್ಕರಿಂದ ಐದು ಲಕ್ಷ ರೂಪಾಯಿ ಖರ್ಚು ಬರುತ್ತದೆ....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಮಾಜದ ಭದ್ರತೆಗೆ ಪೊಲೀಸರ ಪರಿಶ್ರಮ ಅನನ್ಯ-ಕಹಳೆ ನ್ಯೂಸ್

ಮಂಗಳೂರು: ಪೊಲೀಸರು ಸಮಾಜದ ಭದ್ರತೆ ಹಾಗೂ ಶಾಂತಿ ನಿರ್ಮಾಣಕ್ಕೆ ದುಡಿಯುತ್ತಾರೆ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಸಮಾಜದಿಂದ ಗೌರವ ಪ್ರಾಪ್ತಿಯಾಗುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯೆಲ್‌ ಹೇಳಿದರು. ನಗರ ಪೊಲೀಸ್‌, ಜಿಲ್ಲಾ ಪೊಲೀಸ್‌ ಮತ್ತು ಕೆಎಸ್‌ಆರ್‌ಪಿ 7ನೇ ಪಡೆ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಡಿ.ಎ.ಆರ್‌. ಕವಾಯತು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಾಧಕರಿಗೆ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ವತಿಯಿಂದ ಸನ್ಮಾನ-ಕಹಳೆ ನ್ಯೂಸ್

ಮಂಗಳೂರು:ಇತ್ತೀಚೆಗೆ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಗೆ ಭಾಜನರಾದ ಉದಯವಾಣಿ ದಿನಪತ್ರಿಕೆಯ ಛಾಯಾಗ್ರಾಹಕರಾದ ಶ್ರೀ ಸತೀಶ್ ಇರಾ ಹಾಗೂ ವಿಶೇಷ ಚೇತನರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಬಜಾಲ್ ಜಲ್ಲಿಗುಡ್ಡೆ ನಿವಾಸಿ ಶ್ರೀ ಶ್ರಮಿತ್ ಎಂ ಅವರನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್...
1 34 35 36 37 38 105
Page 36 of 105