ಶಿಕ್ಷಣದ ಜೊತೆಗೆ ನೈತಿಕ ಸಂಸ್ಕಾರ ಬೆಳೆಸಿಕೊಳ್ಳಿ: ಶಾಸಕ ವೇದವ್ಯಾಸ ಕಾಮತ್ -ಕಹಳೆ ನ್ಯೂಸ್
ಮಂಗಳೂರು : ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ಕೊಡದೇ ಬದುಕಿನ ಸೈತಿಕ ಸಂಸ್ಕಾರವನ್ನು ಕಲಿಯುವ ನಿಟ್ಟಿನಲ್ಲಿ ಹೆಚ್ಚು ಗಮನ ಕೊಡಬೇಕಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು ೧೨೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭವಿಷ್ಯದ ಅವಕಾಶಕ್ಕಾಗಿ ಇಂದು ಕಾಲೇಜಿನ ವೇದಿಕೆಯನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಿ. ಎಲ್ಲಾ ವಿಚಾರಗಳು ಕೇವಲ ಪಠ್ಯಪುಸ್ತಕದಲ್ಲಿ...






