ಮಂಗಳೂರು: ಮಳೆಹಾನಿ ಪ್ರದೇಶಗಳಿಗೆ ಐವನ್ ಡಿಸೋಜ ಭೇಟಿ -ಕಹಳೆ ನ್ಯೂಸ್
ಮಂಗಳೂರು: ಇಲ್ಲಿಯ ಅಶೋಕ ನಗರ ಮತ್ತು ಪಾಂಡೇಶ್ವರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಐವನ್ ಡಿಸೋಜ ಭೇಟಿ ನೀಡಿ ಶೀಘ್ರ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಶೋಕನಗರದ 26ನೇ ವಾರ್ಡ್ನಲ್ಲಿ ಸಂಪೂರ್ಣವಾಗಿ ಕುಸಿದ ಮನೆಯನ್ನು ಅವರು ಪರಿಶೀಲಿಸಿದರು. ಮನೆಯವರನ್ನು ಸ್ಥಳಾಂತರಿಸಲಾಗಿದ್ದು ಇಲ್ಲಿ ಆಗಿರುವ ನಷ್ಟದ ಬಗ್ಗೆ ವರದಿ ಸಲ್ಲಿಸುವಂತೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಶೆಣೈ ಮತ್ತು ಮಹಾನಗರ ಪಾಲಿಕೆ ಎಂಜಿನಿಯರ್ ಪ್ರಿಯಾಂಕಾ ಅವರಿಗೆ ಐವನ್ ಸೂಚಿಸಿದರು. ನೆರೆಯಿಂದ ಸೊತ್ತುಗಳು ನಾಶವಾಗಿದ್ದರೆ...







