AI ದುರ್ಬಳಕೆ ; ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಗೂ ತಪ್ಪದ ಡೀಪ್‌ಫೇಕ್ ಕಾಟ – ಕಹಳೆ ನ್ಯೂಸ್
ನವದೆಹಲಿ: ನಟ, ನಟಿಯರನ್ನು ಕಾಡುತ್ತಿದ್ದ ಡೀಪ್ ಫೇಕ್ ಬಿಸಿ ಈಗ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರಿಗೂ ತಟ್ಟಿದೆ. ಹೂಡಿಕೆ ಹಗರಣ ಸಂಬಂಧ ತಮ್ಮ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯ ಸಂಸತ್ ಭವನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಐ ದುರ್ಬಳಕೆ ಮಾಡಿಕೊಂಡು ನಕಲಿ ವಿಡಿಯೋ ಸೃಷ್ಟಿಸಲಾಗಿದೆ. ಎಲ್ಲಾ ಹೂಡಿಕೆದಾರರಿಗೆ ನಾನು ಹೇಳೋದೇನಂದ್ರೆ, ಯಾವುದೇ ಸಮಯದಲ್ಲೂ ನಾನು ಹೂಡಿಕೆ ಬಗ್ಗೆ...







