ನಮ್ಮ ಪಕ್ಷದವರು ವಾಪಸ್ ಬರುವ ನಿರೀಕ್ಷೆ ಇದೆ: ಅನಿತಾ ಕುಮಾರಸ್ವಾಮಿ – ಕಹಳೆ ನ್ಯೂಸ್
ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಸಿಎಂ ಅವರು ಬೇಸರವೇನು ಮಾಡಿಕೊಂಡಿಲ್ಲ. ಅವರು ಆರಾಮವಾಗಿದ್ದಾರೆ. ನಮ್ಮ ಪಕ್ಷದವರು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ. ಸೋಮವಾರಕ್ಕೆ ಸದನವನ್ನು ಮುಂದೂಡಲಾಗಿದೆ. ಶಾಸಕರ ರಾಜೀನಾಮೆಯಿಂದ ಸಿಎಂ ಅವರು ಬೇಸರ ಏನು ಮಾಡಿಕೊಂಡಿಲ್ಲ. ಅವರು ಆರಾಮಾಗಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯವಾಗಿದ್ದು, ನಾವು 30...






