ಯೋಗವು ಶಾರೀರಿಕ ಸ್ವಾಸ್ಥ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ- ಟಿ ಶುಭಾ ಜಿ ಶೆಟ್ಟಿ – ಕಹಳೆ ನ್ಯೂಸ್
ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯೋಗವು ಒಂದು ಬೆಳಕು. ಒಂದು ಬಾರಿ ಬೆಳಗಿದರೆ, ಕತ್ತಲಲ್ಲಿ ಇರಲು ಬಿಡುವುದಿಲ್ಲ. ಅದು ಯಾವುದೇ ದೇಶ, ಭಾಷೆ, ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆತಿದೆ. ಯೋಗವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರ ಬದ್ಧವಾಗಿರದೆ, ಉತ್ತಮ ಮಾನಸಿಕ ಸ್ಥಿರತೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ. ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (SPYSS) ಆಫೀಸರ್ಸ್ ಕ್ಲಬ್ ನ ಯೋಗ ಶಿಕ್ಷಕರಾದ...







