Saturday, March 7, 2026

ಚಿಕ್ಕಮಂಗಳೂರು

ಚಿಕ್ಕಮಂಗಳೂರುಜಿಲ್ಲೆಸುದ್ದಿ

ಬೆಂಗಳೂರಿಂದ ಶೃಂಗೇರಿಗೆ ಹೊರಟಿದ್ದ ಎರಡು ಸರ್ಕಾರಿ ಬಸ್‌ ಸೀಜ್‌! -ಕಹಳೆ ನ್ಯೂಸ್

ಚಿಕ್ಕಮಗಳೂರು: ಬೆಂಗಳೂರಿಂದ ಶೃಂಗೇರಿಗೆ ಹೊರಟಿದ್ದ ಚಿಕ್ಕಮಗಳೂರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್‌ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸೀಜ್‌ ಮಾಡಲಾಗಿದೆ. ಅಪಘಾತದ ಪರಿಹಾರದ ಹಣ ಕ್ಲೈಮ್ ಆಗದಿದ್ದಕ್ಕೆ ಕೋರ್ಟ್‌ ಆದೇಶದ ಹಿನ್ನೆಲೆ ವಕೀಲರ ತಂಡ ಬಸ್‌ನ್ನು ಸೀಜ್‌ ಮಾಡಿದೆ. ಬಸ್‌ನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸುವಂತೆ ವಕೀಲರು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ನಡುರಸ್ತೆಯಲ್ಲಿ ಇಳಿಸಿದ್ದಕ್ಕೆ ಜನ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವಾಗ ಮಾರ್ಗ...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಚಾರ್ಮಾಡಿ ದಟ್ಟಡವಿ ಮಧ್ಯೆ ಆನೆ, ಅಪಘಾತದ ಆತಂಕದಲ್ಲಿ ಮಂಜುನಾಥನ ಭಕ್ತರ ಪಾದಯಾತ್ರೆ!-ಕಹಳೆ ನ್ಯೂಸ್

ಚಿಕ್ಕಮಗಳೂರು: ಮಹಾಶಿವರಾತ್ರಿಯಂದು ಶಿವನ ತವರು ಎಂದೇ ಭಾವಿಸಿರುವ ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಿಸಬೇಕೆಂದು ಅಸಂಖ್ಯಾತ ಭಕ್ತರು ಆಸೆ ಹೊತ್ತಿರುತ್ತಾರೆ. ಅದಕ್ಕಾಗಿ ವಾರ-ತಿಂಗಳುಗಳ ಮುಂಚೆಯೇ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ದಿನಕ್ಕೆ ಇಷ್ಟು ಕಿ.ಮೀ. ನಡೆದರೆ ಶಿವರಾತ್ರಿಯಂದೇ ಶಿವನೂರು ತಲುಪುತ್ತೇವೆಂದು ಲೆಕ್ಕಾಚಾರ ಕೂಡ ಹಾಕಿಕೊಂಡಿರುತ್ತಾರೆ. ಭಕ್ತರ ಊರುಗಳ ದೂರಕ್ಕನುಗುಣವಾಗಿ ಪಾದಯಾತ್ರೆ ಆರಂಭಿಸಿ ಶಿವರಾತ್ರಿಯಂದು ಧರ್ಮಸ್ಥಳ ತಲುಪುತ್ತಾರೆ. ಹೀಗೆ ಸಾಗುವ ಭಕ್ತರಿಗೆ ದಾರಿಯುದ್ದಕ್ಕೂ ನೂರಾರು ಕಷ್ಟಗಳು. ಭಕ್ತರು ಅದೆಲ್ಲವನ್ನೂ ಮೆಟ್ಟಿ ನೂರಾರು ಕಿ.ಮೀ. ಪಾದಯಾತ್ರೆ ಹೊರಟು...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು : ಎಕರೆಗಟ್ಟಲೆ ಸೂಕ್ಷ್ಮ ಹುಲ್ಲುಗಾವಲು ಬೆಂಕಿಗಾಹುತಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸುಮಾರು ಒಂದೂವರೆ-ಎರಡು ಕಿ.ಮೀ. ಪಶ್ಚಿಮ ಘಟ್ಟಗಳ ತಪ್ಪಲಿನ ಅಪರೂಪದ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ. ಮೂಡಿಗೆರೆ ಅರಣ್ಯ ವಲಯದೊಳಗೆ ಕಾಣಿಸಿಕೊಂಡಿರುವ ಬೆಂಕಿಯಿಂದ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಕೂಡ ಹೆಚ್ಚಿರುವುದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹರಡಿದ್ದು ಅರಣ್ಯ ಸಂಪತ್ತಿಗೆ...
ಅಂತಾರಾಷ್ಟ್ರೀಯಚಿಕ್ಕಮಂಗಳೂರುಶುಭಾಶಯಸುದ್ದಿ

ಕಾಫಿನಾಡಲ್ಲೊಂದು ಕಡಲಾಚೆಯ ಪ್ರೇಮಕಥೆ : ಚಿಕ್ಕಮಗಳೂರಿನ ಯುವಕನಿಗೆ ಜೋಡಿಯಾದ ಚೀನಾ ಚೆಲುವೆ!- ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರೇಮ  ದೇಶ, ಭಾಷೆ, ಗಡಿ ಎಲ್ಲದ್ದನ್ನೂ ಮೀರಿದ್ದು.. ಅದಕ್ಕೆ ಸಾಕ್ಷಿ ಎಂಬಂತೆ ನಗರದ ಹೌಸಿಂಗ್ ಬೋರ್ಡಿನ ಯುವಕನಿಗೆ ಚೀನಾದ  ಯುವತಿಯೊಬ್ಬಳು ಜೋಡಿಯಾಗಿದ್ದಾಳೆ. ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವಕ ರೂಪಕ್ ಚೀನಾ ಮೂಲದ ಜೇಡ್, ಕುಟುಂಬಸ್ಥರ ಸಮ್ಮುಖದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ  ಮದುವೆಯಾಗಿದ್ದಾರೆ. ಯುವತಿಯ ತಂದೆ – ತಾಯಿಯೇ ಚೀನಾದಿಂದ ಮಗಳನ್ನು ಕರೆತಂದು, ಯುವಕನಿಗೆ ಧಾರೆ ಎರೆದಿದ್ದಾರೆ. ಈ ವೇಳೆ ಭಾರತ-ಚೀನಾ ಸಂಪ್ರದಾಯ ಎರಡು ಒಂದೇ ರೀತಿ...
ಚಿಕ್ಕಮಂಗಳೂರುಜಿಲ್ಲೆಸಂತಾಪಸುದ್ದಿ

ರೋಗಿ ನರಳಾಡಿ ಪ್ರಾಣಬಿಟ್ಟರು, ಮೊಬೈಲ್ ನಲ್ಲಿ ಬ್ಯುಸಿಯಾದ ವೈದ್ಯ : ಸಾರ್ವಜನಿಕರಿಂದ ಆಕ್ರೋಶ – ಕಹಳೆ ನ್ಯೂಸ್

ಚಿಕ್ಕಮಗಳೂರು : ರೋಗಿಗಳು ಆಸ್ಪತ್ರೆಗೆ ಬಂದರೆ ವೈದ್ಯರು ತಕ್ಷಣ ಅವರನ್ನು ಪರಿಶೀಲಿಸಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಆದರೆ ಇಲ್ಲಿ ಒಬ್ಬ ವೈದ್ಯ ರೋಗಿ ಬಂದು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದರು ಕೂಡ ನಿರ್ಲಕ್ಷ ವಹಿಸಿದ್ದು, ವೈದ್ಯ ಮತ್ತು ಸಿಬ್ಬಂದಿಗಳ ನಿರ್ಲಕ್ಷಕ್ಕೆ 60 ವರ್ಷದ ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಹೌದು ವೈದ್ಯ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ರೋಗಿ ಬಲಿಯಾಗಿದ್ದಾರೆ. ರೋಗಿಯು ನೋವಿನಿಂದ ನರಳಾಡುತ್ತಿದ್ದರೆ, ಮತ್ತೊಂದೆಡೆ ಫೋನಲ್ಲಿ ವೈದ್ಯ...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ನಿಶ್ಚಿತಾರ್ಥವಾದ ಯುವತಿಗೆ ‘ಇನ್ಸ್ಟಾಗ್ರಾಮ್’ ನಲ್ಲಿ ಮೆಸೇಜ್ ಮಾಡಿ ಕಾಟ : ಯುವಕನ ಬರ್ಬರ ಹತ್ಯೆ.! – ಕಹಳೆ ನ್ಯೂಸ್

ಚಿಕ್ಕಮಗಳೂರು : ನಿಶ್ಚಿತಾರ್ಥವಾದ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಕಾಟ ಕೊಟ್ಟ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಂಜುನಾಥ್ ಗೆ ಯುವತಿಯೋರ್ವಳ ಪರಿಚಯವಾಗಿತ್ತು. ಆಕೆಗೆ ಬೇರೆ ಹುಡುಗ (ವೇಣು) ಜೊತೆ ಎಂಗೇಜ್ ಮೆಂಟ್...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಸ್ವಂತ ಕಾರಿಗೆ ಪೊಲೀಸ್ ನಾಮಫಲಕ: ಎಎಸ್‌ಐಗೆ ದಂಡ ಹಾಕಿದ ಪೊಲೀಸರು – ಕಹಳೆ ನ್ಯೂಸ್

ಮೂಡಿಗೆರೆ : ಕುಟುಂಬದೊಂದಿಗೆ ಕಾರಿನಲ್ಲಿ ಪ್ರವಾಸ ತೆರಳುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕಾರಿಗೆ 'ಪೊಲೀಸ್‌' ನಾಮಫಲಕ ಹಾಕಿಕೊಂಡಿದ್ದಕ್ಕೆ ಸ್ಥಳೀಯ ಪೊಲೀಸರು ಅವರಿಗೆ ದಂಡ ವಿಧಿಸಿದ ಘಟನೆ ಕೊಟ್ಟಿಗೆಹಾರದ ಚೆಕ್ ಪೋಸ್ಟ್‌ನಲ್ಲಿ ಗುರುವಾರ ನಡೆದಿದೆ. ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಖಾಸಗಿ ವಾಹನದ ಮುಂಭಾಗಕ್ಕೆ 'ಪೊಲೀಸ್' ಎಂಬ ನಾಮ ಫಲಕ ಹಾಕಿ ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬದೊಂದಿಗೆ ಪ್ರವಾಸ ತೆರಳುತ್ತಿದ್ದರು. ಕೊಟ್ಟಿಗೆಹಾರದ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಬಣಕಲ್ ಸಬ್‌ ಇನ್‌ಸ್ಪೆಕ್ಟರ್...
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಕದ್ದುಮುಚ್ಚಿ ಮದ್ವೆ: ಪ್ರಿಯಕರನ್ನ ಜೈಲಿಗಟ್ಟಿದ ಯುವತಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಬಳಿಕ ಪ್ರೇಯಸಿಗೆ ಕೈ ಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿದ್ದ. ಬೇರೆಯವರನ್ನ ಮದುವೆಯಾಗುತ್ತಿದ್ದಂತೆ ಇತ್ತ ಪ್ರೇಯಸಿ ಹುಡುಗನ ಮನೆ, ಕಲ್ಯಾಣ ಮಂಟಪಕ್ಕೆ ಹೋಗಿ ನನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದು ರಂಪಾಟ ಮಾಡಿರುವಂತಹ ಘಟನೆ ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಾನೂನು ಹೋರಾಟದ ಶಪತ ಮಾಡಿದ್ದ ನೊಂದ ಯುವತಿ, ಮೋಸ ಮಾಡಿದ್ದ ಲವರ್​​ನನ್ನು ಜೈಲಿಗೆ ಕಳುಹಿಸಿದ್ದಾರೆ. ಚಿಕ್ಕಮಗಳೂರು ನಗರದ ಕಲ್ಯಾಣ ನಗರದ...
1 2 3 7
Page 1 of 7