ಲೈವ್ ಚಾನೆಲ್ ಅಸೋಸಿಯೇಶನ್ ಅಸ್ತಿತ್ವಕ್ಕೆ ಸಂಘಟಿತರಾದಲ್ಲಿ ಸದೃಢರಾಗಲು ಸಾಧ್ಯ – ವಾಲ್ಟರ್ ನಂದಳಿಕೆ ತಂತ್ರಜ್ಞಾನದೊAದಿಗೆ ಬದಲಾವಣೆ ಅವಶ್ಯ – ಪದ್ಮಪ್ರಸಾದ್ ಜೈನ್ -ಕಹಳೆ ನ್ಯೂಸ್
ಕಾರ್ಕಳ : ಲೈವ್ ಚಾನೆಲ್ ನಡೆಸುವವರು ಸಂಘಟಿತರಾದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಲೈವ್ ಚಾನೆಲ್ ಅಸೋಸಿಯೇಶನ್ ಸ್ಥಾಪನೆ ಉತ್ತಮ ಬೆಳವಣಿಗೆ ಎಂದು ದಾಯ್ಜಿವರ್ಲ್ಡ್ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು. ಅವರು ಸೆ. 17ರಂದು ಕಾರ್ಕಳ ಬಂಡಿಮಠ ಶ್ರೀ ಮೂಡುಮಹಾಗಣಪತಿ ಕಲಾಮಂದಿರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಲೈವ್ ಚಾನೆಲ್ ಅಸೋಸಿಯೇಶನ್ ಉದ್ಘಾಟಿಸಿ ಬಳಿಕ ಮಾತನಾಡಿದರು. ಲೈವ್ ಚಾನೆಲ್ ಸಂಸ್ಥೆ ಮಾಲಕರು ಪ್ರಸ್ತುತ ಅನೇಕ ಸಮಸ್ಯೆ, ಸವಾಲುಗಳನ್ನು...







