Tuesday, March 10, 2026

ಜಿಲ್ಲೆ

ದಕ್ಷಿಣ ಕನ್ನಡಪುತ್ತೂರು

ಪುತ್ತೂರಿನಲ್ಲಿ ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಆಕ್ರೋಶ ; ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ ವಿದ್ಯಾರ್ಥಿ ಶಕ್ತಿ – ಕಹಳೆ ನ್ಯೂಸ್

ಪುತ್ತೂರು: ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಜತೆಗಿನ ಗಡಿ ಸಂಘರ್ಷದಲ್ಲಿ ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಪುತ್ತೂರಿನಲ್ಲೂ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಜೊತೆಗೆ ಜೂ. 18ರಂದು ಮುಸ್ಸಂಜೆ ಇಲ್ಲಿನ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಎದುರು ಎಬಿವಿಪಿ ಕಾರ್ಯಕರ್ತರು ಚೀನಾದ ಧ್ವಜಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸಂಘಪರಿವಾರದ ಹಿರಿಯ ಕಾರ್ಯಕರ್ತ ಚಂದ್ರಶೇಖರ್ ಅವರು ಹುತಾತ್ಮ...
ದಕ್ಷಿಣ ಕನ್ನಡಪುತ್ತೂರು

ಪುತ್ತೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹುತಾತ್ಮ ಯೋಧರಿಗೆ ನಮನ ; ಹಣತೆ ಹಚ್ಚಿ, ತಾಯಿ ಭಾರತಮಾತೆಗೆ ಪುಷ್ಪಾರ್ಚನೆ – ಕಹಳೆ ನ್ಯೂಸ್

ಪುತ್ತೂರು: ಲಾಡಕ್‌ನ ಗಡಿಯಲ್ಲಿ ಹುತಾತ್ಮರದ ಯೋಧರಿಗೆ ಬಿಜೆಪಿ ಯುವ ಮೋರ್ಚಾದ ವತಿಯಿಂದ ಹಣತೆ ಹಚ್ಚಿ, ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಕಾರ್ಯಕ್ರಮ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜೂ. 18ರಂದು ಸಂಜೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ನಗರ ಮಂಡಲದ ಅಧ್ಯಕ್ಷ ಪಿ. ಜಿ. ಜಗನ್ನಿವಾಸ್ ರಾವ್ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್...
ದಕ್ಷಿಣ ಕನ್ನಡಪುತ್ತೂರು

” ಚೀನಾ ನರಿ ಬುದ್ದಿಗೆ ಭಾರತ ತಕ್ಕ ಉತ್ತರ ಕೊಡಲಿದೆ ” – ಪುತ್ತೂರಿನಲ್ಲಿ ಹುತಾತ್ಮ ಭಾರತೀಯ ಯೋಧರಿಗೆ ಅಮರ್ ಜವಾನ್ ಜ್ಯೋತಿ ಬಳಿ ಬಿಜೆಪಿ ಶ್ರದ್ಧಾಂಜಲಿ ; ಪ್ರಧಾನಿ ನಡೆ ಸಮರ್ಥನೆ, ಶ್ಲಾಘನೆ – ಕಹಳೆ ನ್ಯೂಸ್

ಪುತ್ತೂರು : ಗಾಲ್ವನ್ ಕಣಿವೆಯಲ್ಲಿ ನಡೆದ ಘರ್ಷನೆಯಲ್ಲಿ ಹುತಾತ್ಮರಾದ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿವರಿಗೆ ಬೆಂಬಲವಾಗಿ ನಾವು ಚೀನಾ ವಿರೋಧವನ್ನು ಕೇವಲ ಮಾತಿನಲ್ಲಿ ಹೇಳದೆ ಕೃತಿಯಲ್ಲೂ ಮಾಡಿ ತೋರಿಸಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿದರು. ಜೂ.೧೬ರಂದು ಗಡಿಯಲ್ಲಿ ಚೀನಾದೊಂದಿಗೆ ನಡೆದ ಘರ್ಷನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಇಲ್ಲಿನ ಕಿಲ್ಲೆ ಮೈದಾನದ ಅಮರ್...
ಉಡುಪಿಸುದ್ದಿ

ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಯಶಸ್ವಿ ಹೆರಿಗೆ ಮಾಡಿದ ಉಡುಪಿಯ ವೈದ್ಯರು ; ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು..! – ಕಹಳೆ ನ್ಯೂಸ್

ಉಡುಪಿ: ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಯಶಸ್ವಿಯಾಗಿ ಹೆರಿಗೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಟಿಎಂಎಪೈ ಆಸ್ಪತ್ರೆಯಲ್ಲಿ 22 ವರ್ಷದ ತುಂಬು ಗರ್ಭಿಣಿಗೆ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಈ ಗರ್ಭಿಣಿಯು ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಬಾಣಂತಿ ಮಗು ಆರೋಗ್ಯವಾಗಿದ್ದಾರೆ. ಇನ್ನು ಇದು ರಾಜ್ಯದ ಇತಿಹಾಸದಲ್ಲಿ ಪ್ರಥಮ ಸಿಜೇರಿಯನ್ ಹೆರಿಗೆಯಾಗಿದ್ದು, ಬಾಣಂತಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋವಿಡ್ ಆಸ್ಪತ್ರೆ ವೈದ್ಯ ಡಾ. ಶಶಿಕಿರಣ್ ಮಾಹಿತಿ ನೀಡಿದ್ದಾರೆ....
ದಕ್ಷಿಣ ಕನ್ನಡಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಹುಟ್ಟೂರಿಗೆ ಬಂದ ಯೋಧ ಸಂದೇಶ್ ಶೆಟ್ಟಿ ಪಾರ್ಥಿವ ಶರೀರ ; ಶಾಸಕ ಹರೀಶ್ ಪೂಂಜ ಸೇರಿದಂತೆ ಗಣ್ಯರಿಂದ ನಮನ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಾಯ..! – ಕಹಳೆ ನ್ಯೂಸ್

ಬೆಳ್ತಂಗಡಿ: ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಯೋಧ ಸಂದೇಶ್ ಶೆಟ್ಟಿ ಅವರು ಪಾರ್ಥಿವ ಶರೀರ ಇಂದು ಸಂಜೆ ಸ್ವ ಗ್ರಾಮ ಬಾರ್ಯಕ್ಕೆ ತರಲಾಯಿತು. ಯೋಧ ಸಂದೇಶ್ ಶೆಟ್ಟಿಯವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಹಾಗೂ ಸೈನ್ಯ ಗೌರವಗಳನ್ನು ಸಲ್ಲಿಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸ್ಥಳೀಯಾಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಬಾರ್ಯಾದ ನಿವಾಸಿಯಾಗಿರುವ ಸಂದೇಶ್ ಶೆಟ್ಟಿ ಕಳೆದ 14 ವರ್ಷಗಳಿಂದ ಭಾರತೀಯ...
ದಕ್ಷಿಣ ಕನ್ನಡಪುತ್ತೂರು

ಚೀನಾ ಆಕ್ರಮಣಕ್ಕೆ ಹುತಾತ್ಮರಾದ ಯೋಧರಿಗೆ ಪುತ್ತೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಅಮರ್ ಜವಾನ್ ಜ್ಯೋತಿ ಬಳಿ ಗೌರವ ಸಮರ್ಪಣೆ – ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ – ಕಹಳೆ ನ್ಯೂಸ್

ಪುತ್ತೂರು: ಭಾರತ ದೇಶದ ವೀರ ಸೈನಿಕರು ಸಾಯುವುದಿಲ್ಲ. ದೇಶದ ಗಡಿ ಭಾಗದಲ್ಲಿ ದೇಶಕ್ಕಾಗಿ ಹೋರಾಟ ಮಾಡುತ್ತಾರೆ. ಚೀನಾ ಪಡೆ ವಿರುದ್ಧ ನಡೆದ ಘರ್ಷಣೆಯಲ್ಲಿ ನಮ್ಮ ಸೈನಿಕರು ಬಲಿದಾನ ಆಗಿದ್ದಾರೆ. ಈ ನಿಟ್ಟಿನಲ್ಲಿ ನಾವು ಕೂಡಾ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶದ ಒಳಗಿನ ಯೋಧರಾಗಿ ಹೋರಾಟ ಮಾಡೋಣ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಅವರು ಹೇಳಿದರು. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ...
ದಕ್ಷಿಣ ಕನ್ನಡಪುತ್ತೂರು

” ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದೇ ಯೋಧರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ” – ವಿಶ್ವಹಿಂದೂ ಪರಿಷತ್ತು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಆಗ್ರಹ – ಕಹಳೆ ನ್ಯೂಸ್

ಪುತ್ತೂರು: ಭಾರತದ ಗಡಿಯಲ್ಲಿ ವಿನಃ ಕಾರಣ ತಗಾದೆ ತೆಗೆಯುತ್ತಿರುವ ಚೀನಾಕ್ಕೆ ನಮ್ಮ ಯೋಧರು ಪ್ರತ್ಯುತ್ತರ ನೀಡಿದ್ದಾರೆ. ಈ ಘರ್ಷಣೆಯಲ್ಲಿ ನಮ್ಮ 20 ಯೋಧರ ಬಲಿದಾನವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಚೀನಾದ ಸರಕು, ವಸ್ತುಗಳನ್ನು ಬಹಿಷ್ಕರಿಸುವುದೇ ಯೋಧರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಹೇಳಿದರು. ಅವರು ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನಾಪಡೆ ವಿರುದ್ಧ ನಡೆದ ಸಂಘರ್ಷದ ವೇಳೆ...
ದಕ್ಷಿಣ ಕನ್ನಡರಾಜಕೀಯಸುದ್ದಿ

ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಫೈನಲ್ ; ಬಿಜೆಪಿಯ ಹಿರಿಯ ಮುಖಂಡ, ನಿಷ್ಠಾವಂತ ಕಾರ್ಯಕರ್ತ ಪ್ರತಾಪ್ ಸಿಂಹ ನಾಯಕ್ ಗೆ ಟಿಕೆಟ್ – ಕಹಳೆ ನ್ಯೂಸ್

ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ. ಎಂಟಿಬಿ ನಾಗರಾಜ್ ಆರ್.ಶಂಕರ್, ಸುನಿಲ್ ವಯ್ಯಾಪುರೆ ಹಾಗೂ ಪ್ರತಾಪ ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಿದ್ದು, ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ವಿಧಾನಸಭಾ ಬಲಾ ಬಲದ ಆಧಾರದ ಮೇಲೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ...
1 935 936 937 938
Page 937 of 938