Monday, March 16, 2026

ಜಿಲ್ಲೆ

ದಕ್ಷಿಣ ಕನ್ನಡ

ದಕ್ಷಿಣಕನ್ನಡ ಡಿ.ಸಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೊರೊನಾ ದೃಢ-ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ಮಂಗಳವಾರ ದೃಢಪಟ್ಟಿದೆ. ಜಿಲ್ಲಾಧಿಕಾರಿಯಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಸೋಂಕಿಗೆ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಅವರು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.ಈ ನಡುವೆ ಜಿಲ್ಲಾಧಿಕಾರಿಯವರ ಪತ್ನಿ ಹಾಗೂ ಮಗುವಿಗೂ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ವಯಂ ಆಗಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ....
ಜಿಲ್ಲೆ

ಬ್ರಿಟಿಷರಿಗಿಂತ ಹೆಚ್ಚಾಗಿ ಸಮಾಜ ಒಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ: ಕಟೀಲ್ ಟೀಕೆ-ಕಹಳೆ ನ್ಯೂಸ್

ಬೆಳಗಾವಿ: 'ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಬ್ರಿಟಿಷರಿಗಿಂತ ಹೆಚ್ಚಾಗಿ ಸಮಾಜವನ್ನು ಒಡೆದ ಮುಖ್ಯಮಂತ್ರಿ ಇದ್ದರೆ ಅವರು ಸಿದ್ದರಾಮಯ್ಯ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು. ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 'ಮಾಜಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಗೌರವದಿಂದ ನಡೆದುಕೊಳ್ಳಬೇಕು ಹಾಗೂ ಮಾತನಾಡಬೇಕು. ಅವರು ಮುಖ್ಯಮಂತ್ರಿ ಇದ್ದಾಗ ಮೂರು ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ಅವರು ಒಬ್ಬ ರೈತರ ಮನೆಗೂ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಲಿಲ್ಲ....
ದಕ್ಷಿಣ ಕನ್ನಡ

ಕರ್ನಾಟಕ ಬಂದ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ -ಕಹಳೆ ನ್ಯೂಸ್

ಮಂಗಳೂರು: ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದ್ದು, ಎಂದಿನಂತೆ ಖಾಸಗಿ ಬಸ್‌ಗಳು ಮತ್ತು ಕೆ ಎಸ್ ಆರ್ ಟಿ ಸಿ ಬಸ್‌ಗಳು, ಆಟೋಗಳು ರಸ್ತೆಗಿಳಿದಿದ್ದು, ಬಂದರು ಪ್ರದೇಶದಲ್ಲಿ ವ್ಯಾಪಾರ ವಹಿವಾಟುಗಳು ಆರಂಭವಾಗಿದೆ. ಇನ್ನು ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಗರದಾದ್ಯಂತ 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 6 ಕೆಎಸ್‌ಆರ್‌ಪಿ, 8 ಡಿಎಆರ್ ತುಕಡಿಗಳು ಮತ್ತು 50 ಹೋಂ ಗಾರ್ಡ್...
ದಕ್ಷಿಣ ಕನ್ನಡ

ಪಣೋಲಿಬೈಲು ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ರಶ್ಮಿ ಎಸ್. ಆರ್ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಬಂಟ್ವಾಳ : ಕಾರಣಿಕ ಕ್ಷೇತ್ರ ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ದೈವಸ್ಥಾನದ ಆಡಳಿತ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಗುರುವಾರ ಅಧಿಕಾರ ಸ್ವೀಕರಿಸಿದರು. ಈ ಹಿನ್ನಲೆ ಪಣೋಲಿಬೈಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅರ್ಚಕ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು....
ದಕ್ಷಿಣ ಕನ್ನಡ

ದ.ಕ: 20 ಸಾವಿರದತ್ತ ಸೋಂಕಿನ ಸಂಖ್ಯೆ – ಕಹಳೆ ನ್ಯೂಸ್

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ 456 ಜನರಿಗೆ ಕೋವಿಡ್-19 ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20 ಸಾವಿರ ಗಡಿಯತ್ತ ಸಾಗಿದೆ. ಶುಕ್ರವಾರ 340 ಮಂದಿ ಗುಣಮುಖರಾಗಿದ್ದು, ಮೃತಪಟ್ಟಿರುವ 11 ಜನರಿಗೆ ಕೋವಿಡ್-19 ಇರುವುದು ಖಚಿತವಾಗಿದೆ. ಜಿಲ್ಲೆಯ ದೃಢವಾಗಿರುವ ಪ್ರಕರಣಗಳ ಪೈಕಿ 131 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. 236 ಮಂದಿಗೆ ಶೀತ ಜ್ವರ ಲಕ್ಷಣದಿಂದ, 14 ಮಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್-19 ಪತ್ತೆಯಾಗಿದ್ದು, 75 ಮಂದಿಯ ಸೋಂಕಿನ ಮೂಲವನ್ನು...
ಜಿಲ್ಲೆ

ಆಯಂಟಿ ಡ್ರಗ್ ಸೆಲ್‌ ಸಕ್ರಿಯಗೊಳಿಸಿ: ಪ್ರೊ.ಪಿ.ಎಸ್. ಯಡಪಡಿತ್ತಾಯ – ಕಹಳೆ ನ್ಯೂಸ್

ಮಂಗಳೂರು: ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿರುವ ಆಯಂಟಿ ಡ್ರಗ್ ಸೆಲ್‌ಗಳು ಕಾರ್ಯರೂಪಕ್ಕೆ ಬಂದು ಸಂಚಲನ ಮೂಡಿಸಬೇಕು. ಯಾವುದೇ ಕಾರಣಕ್ಕೂ ಕಾಲೇಜು ಆವರಣದಲ್ಲಿ ಡ್ರಗ್ಸ್ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಸೂಚನೆ ನೀಡಿದರು. ಶುಕ್ರವಾರ ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ 'ಫಿಟ್ ಇಂಡಿಯಾ' ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದ್ದು, ಅವರು ಆರೋಗ್ಯಪೂರ್ಣವಾಗಿದ್ದಲ್ಲಿ ದೇಶದ ಸುಧಾರಣೆಯಲ್ಲಿ ಬದಲಾವಣೆ ಮಾಡುವ ಶಕ್ತಿ ಹೊಂದಿದ್ದಾರೆ....
ಜಿಲ್ಲೆದಕ್ಷಿಣ ಕನ್ನಡ

ವಿಶ್ವ ದಾಖಲೆ ಬರೆದ ಆದಿ ಸ್ವರೂಪಾ – ಕಹಳೆ ನ್ಯೂಸ್

ಮಂಗಳೂರು: ಏಕಕಾಲದಲ್ಲಿ ಎರಡು ಕೈಗಳಿಂದ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಇಂಗ್ಲಿಷ್ ಪದಗಳನ್ನು ಬರೆಯುವ ವಿದ್ಯಾರ್ಥಿನಿ ಆದಿ ಸ್ವರೂಪಾಳ ಪ್ರತಿಭೆಗೆ ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಷನ್, ಎಕ್ಸ್‌ಕ್ಲೂಸಿವ್ ವರ್ಡ್ ರೆಕಾರ್ಡ್ ದಾಖಲೆಯನ್ನು ಘೋಷಿಸಿದೆ. ಇಲ್ಲಿನ ಕೊಡಿಯಾಲ್‌ಬೈಲ್ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಆದಿ ಸ್ವರೂಪಾ, ಎರಡೂ ಕೈಯಲ್ಲಿ ಸರಾಗವಾಗಿ ಬರೆಯುತ್ತಾಳೆ. ಎರಡು ವರ್ಷಗಳಲ್ಲಿ ಈಕೆ ಹತ್ತು ವಿಭಿನ್ನ ರೀತಿಯಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ....
ಕಾಸರಗೋಡುಸುದ್ದಿ

ಕೇಶವಾನಂದಭಾರತೀ ಶ್ರೀಪಾದರ ನಿಧನ ಹಿನ್ನಲೆ ; ಎಡನೀರು ಮಠದ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯರು ” ಶ್ರೀ ಶ್ರೀ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ” ಅಧಿಕೃತ ಘೋಷಣೆ – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಶನಿವಾರ ಮಧ್ಯರಾತ್ರಿ 12.30ಕ್ಕೆ ದೈವಾದೀನರಾಗಿದ ಹಿನ್ನಲೆಯಲ್ಲಿ ಶ್ರೀಎಡನೀರು ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ನಿಯುಕ್ತಿ ಮಾಡಲಾಗಿದೆ. ಈ ಹಿಂದೆ ಮಠದಲ್ಲಿ ಶ್ರೀಗಳ‌ ಜೊತೆಗಿದ್ದ, ಶ್ರೀ ಜಯರಾಮ ಮಂಜತ್ತಾಯರನ್ನು ಶ್ರೀಗಳ ಆಸೆಯಂತೆ ಇಂದು ಉತ್ತರಾಧಿಕಾರಿ ಎಂದು, ಮಠದ ಪ್ರಮುಖರು ಹಾಗೂ ವಿದ್ವಾಂಸರು, ತಂತ್ರಿಗಳ ಸಭೆಯಲ್ಲಿ ಘೋಷಣೆ ಮಾಡಲಾಗಿದೆ‌. 28/9/2020 ರಂದು ಪೀಠಾರೋಹಣ ನಡೆಯಲಿದೆ. ಸಭೆಯಲ್ಲಿ ಮಠದ ಭಕ್ತರಾದ ಟಿ. ಶ್ಯಾಮ್ ಭಟ್ ,...
1 916 917 918 919 920 942
Page 918 of 942