ಎಣ್ಣೆ ಮತ್ತಲ್ಲಿ ಸ್ನೇಹಿತನ ಹತ್ಯೆಗೈದು ಸೆಲ್ಫಿ ವೀಡಿಯೋ ಮಾಡಿದ್ದವ ಅರೆಸ್ಟ್ – ಕಹಳೆ ನ್ಯೂಸ್
ಹಾಸನ: ಎಣ್ಣೆ ಮತ್ತಲ್ಲಿ ಸ್ನೇಹಿತನನ್ನು ಹತ್ಯೆಗೈದು ಸೆಲ್ಫಿ ವೀಡಿಯೋ ಮಾಡಿದ್ದ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಲ್ಲಾಸ್ (21) ಎಂದು ಗುರುತಿಸಲಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಸ್ನೇಹಿತ ಕೀರ್ತಿಯನ್ನು ಡಿ.8 ರಂದು ಕೊಲೆಗೈದಿದ್ದ. ಈ ಇಬ್ಬರು ಆಟೋ ಚಾಲಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಅತಿಯಾಗಿ ಮದ್ಯ ಸೇವಿಸಿ ಮಾತನಾಡುವಾಗ ಉಲ್ಲಾಸ್ ಕೆನ್ನೆಗೆ ಕೀರ್ತಿ ಬಾರಿಸಿದ್ದ. ಇದರಿಂದ ಕೋಪಗೊಂಡಿದ್ದ ಉಲ್ಲಾಸ್, ಮತ್ತೆ...







