ಪಾಕ್ ಉಗ್ರರಿಗೆ ಮಂಗಳೂರಿನಿಂದ ಹಣ ; ಕಣ್ಣುಮುಚ್ಚಿ ಕುಳಿತ ಸರಕಾರ!
ಮಂಗಳೂರು : ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಯೋತ್ಪಾದಕರ ಜಾಲವಿದೆ ಎಂಬ ವಾದಕ್ಕೆ ಪುಷ್ಟಿ ನೀಡುವಂತೆ, ಜಾರಿ ನಿರ್ದೇಶನಾಲಯ (ಇ.ಡಿ.), ರಾಜ್ಯದಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಿಗೆ ಸೇರಿದ ೫ ಲಕ್ಷ ರು. ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದಲ್ಲದೆ, ಈ ಉಗ್ರರಿಗೆ ಪಾಕಿಸ್ತಾನದ ನಂಟು ಕೂಡ ಇದೆ ಎಂಬ ವಿಷಯವನ್ನು ಅದು ಖಚಿತಪಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್'ಎ) ಅನುಸಾರ ಮಂಗಳೂರಿನಲ್ಲಿನ...







